Advertisement

ಅಪ್ಪು ರಿಲೀಸ್ ಮಾಡಲಿದ್ದಾರೆ ‘ಚಂಬಲ್’ ಟ್ರೈಲರ್

08:38 AM Jan 29, 2019 | Team Udayavani |

‘ಅಯೋಗ್ಯ’ ಚಿತ್ರ ಶತದಿನ ಪೂರೈಸಿರುವ ಖುಷಿಯಲ್ಲಿಯೇ ನೀನಾಸಂ ಸತೀಶ್ ಅವರ ಮುಂದಿನ ಚಿತ್ರ ‘ಚಂಬಲ್’ ಬಿಡುಗಡೆಗೆ ಸಿದ್ಧವಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟಿಸಿರುವ ‘ಚಂಬಲ್’ ಚಿತ್ರದ ಟ್ರೈಲರ್ ಜನವರಿ 31ರಂದು ಬಿಡುಗಡೆಗೊಳ್ಳುತ್ತಿದೆ. ಇನ್ನೂ ವಿಶೇಷ ಅಂದ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡುತ್ತಿರುವುದು ಚಿತ್ರತಂಡದ ‘ಪವರ್’ ಅನ್ನು ಇನ್ನಷ್ಟು ಹೆಚ್ಚಿಸಿದೆ.

Advertisement

ನೀನಾಸಂ ಸತೀಶ್ ಅವರಿಗೆ ತನ್ನ ಈ ಚಿತ್ರದ ಟ್ರೈಲರ್ ಅನ್ನು ಅಪ್ಪು ಸಾರ್ ಕೈಯಿಂದಲೇ ಬಿಡುಗಡೆ ಮಾಡಿಸಬೇಕೆಂಬ ಆಸೆ ಇತ್ತಂತೆ. ಅದಕ್ಕೆ ಪೂರಕವಾಗಿ ಚಿತ್ರತಂಡವು ಅಪ್ಪು ಅವರ ಕೈಯಿಂದಲೇ ‘ಚಂಬಲ್’ ಚಿತ್ರದ ಟ್ರೈಲರ್ ಅನ್ನು ಬಿಡುಗಡೆಗೊಳಿಸುತ್ತಿದೆ. ಸತೀಶ್ ಅವರ ‘ಅಯೋಗ್ಯ’ ಚಿತ್ರದ ಹಾಡೊಂದನ್ನು ಕೂಡ ಪುನೀತ್ ಅವರೇ ಬಿಡುಗಡೆಗೊಳಿಸಿದ್ದರು. ಪೃಥ್ವೀ ಹಾಗೂ ಸವಾರಿ ಚಿತ್ರಗಳನ್ನು ನಿರ್ದೇಶಿಸಿದ್ದ ಜಾಕೊಬ್ ವರ್ಗೀಸ್ ಅವರ ನಿರ್ದೇಶನದಲ್ಲಿ ‘ಚಂಬಲ್’ ಚಿತ್ರ ಮೂಡಿಬರುತ್ತಿದೆ. ಪೂರ್ಣಚಂದ್ರ ತೇಜಸ್ವಿ ಹಾಗೂ ಜೂಡಾ ಸ್ಯಾಂಡಿ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next