ಚಾಮರಾಜನಗರ: ಜಿಲ್ಲೆಯಲ್ಲಿ ಶನಿವಾರ 64 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿವೆ. 27 ಮಂದಿ ಗುಣಮುಖರಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,551ಕ್ಕೇರಿದೆ. ಇದರಲ್ಲಿ 447 ಸಕ್ರಿಯ ಪ್ರಕರಣಗಳಿದ್ದು, 24 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುಂಡ್ಲುಪೇಟೆ ತಾಲೂಕಿನಿಂದ 12, ಚಾಮರಾಜನಗರ ತಾಲೂಕಿನಿಂದ 23, ಕೊಳ್ಳೇಗಾಲ ತಾಲೂಕಿನಿಂದ 13, ಯಳಂದೂರು ತಾಲೂಕಿನಿಂದ 14, ಹನೂರು ತಾಲೂಕಿನಿಂದ 2 ಪ್ರಕರಣಗಳು ಇಂದು ವರದಿಯಾಗಿವೆ.
ಶನಿವಾರ ಒಟ್ಟು 666 ಜನರ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಇವುಗಳ ಪೈಕಿ 602 ರಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ. ಒಟ್ಟು 134 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 1074 ಜನರು ಗುಣಮುಖರಾಗಿದ್ದಾರೆ.
ಇಂದಿನ ಪ್ರಕರಣಗಳು-64
ಇಂದು ಗುಣಮುಖ-27
ಒಟ್ಟು ಗುಣಮುಖ-1074
ಇಂದಿನ ಸಾವು-0
ಒಟ್ಟು ಸಾವು-30
ಸಕ್ರಿಯ ಪ್ರಕರಣ-447
ಒಟ್ಟು ಸೋಂಕಿತರು-1551