ಹನೂರು: ಕೊರೊನಾ ಸಂಕಷ್ಟದಲ್ಲಿ ಕೃತಕ ಅಭಾವಸೃಷ್ಟಿಸಿ ದುಬಾರಿ ಬೆಲೆತೆತ್ತು ರೈತರು ರಸಗೊಬ್ಬರ ಖರೀದಿಸಬೇಕಾಗಿದೆ. ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯಪಿ.ಜಿ.ಪಾಳ್ಯ, ಹೊಸದೊಡ್ಡಿ, ಒಡೆಯರಪಾಳ್ಯ,ಹುತ್ತೂರು, ಬೈಲೂರು ಮತ್ತಿತರ ಗ್ರಾಮಗಳಲ್ಲಿಆಲೂಗೆಡ್ಡೆ, ಬೆಳ್ಳುಳ್ಳಿ ಇನ್ನಿತರ ಬೆಳೆ ಬಿತ್ತನೆ ಶುರುವಾಗಿದೆ. ಈ ಬೆಳೆಗಳಿಗೆ ರಸಗೊಬ್ಬರ ಅನಿವಾರ್ಯವಾಗಿದ್ದು, ಪರಿಸ್ಥಿತಿಯ ಲಾಭಪಡೆಯಲು ಅಂಗಡಿಗಳ ಮಾಲಿಕರು ದುಬಾರಿಬೆಲೆಗೆ ರಸಗೊಬ್ಬರ ಮಾರುತ್ತಿದ್ದಾರೆ.
ದುಬಾರಿ ದರ: ತೋಟಗಾರಿಕಾ ಬೆಳೆಗಳ ಬಿತ್ತನೆಗೆಡಿಎಪಿ ರಸಗೊಬ್ಬರ ನೀಡಬೇಕು. ಡಿಎಪಿರಸಗೊಬ್ಬರಕ್ಕೆ ಸರ್ಕಾರ 1200 ರೂ. ದರನಿಗದಿಪಡಿಸಿದೆ. ಆದರೆ, ಅಂಗಡಿ ಮಾಲೀಕರುಕೃತಕ ಅಭಾವ ಸೃಷ್ಟಿಸಿ 500-800 ರೂ.ಹೆಚ್ಚುವರಿಹಣ ಪಡೆಯುತ್ತಿದ್ದಾರೆ. 2 ಸಾವಿರ ರೂ. ನೀಡಿದರೆಮಾತ್ರ ಡಿಎಪಿ ಗೊಬ್ಬರ ಸಿಗುತ್ತಿದೆ. ಜೊತೆಗೆಇನ್ನಿತರ ರಸಗೊಬ್ಬರಗಳಾದ ಯುರಿಯಾ,ಪೊಟ್ಯಾಷ್‌ಗಳನ್ನೂ ಹೆಚ್ಚಿನ ದರಕ್ಕೆ ಮಾರಾಟಮಾಡುತ್ತಿದ್ದಾರೆ.ಈ ಬಗ್ಗೆ ರೈತರು ಪ್ರಶ್ನಿಸಿದರೆ ರಸಗೊಬ್ಬರವೇಇಲ್ಲ? ಏನಾದರೂ ಮಾಡಿಕೋ? ಎಲ್ಲಿ ಬೇಕಾದರೂ ಹೋಗಿ ಎಂದು ಮಾಲಿಕರು ಉಡಾಫೆಯಾಗಿ ವರ್ತಿಸುತ್ತಾರೆ.
ರೈತರು ವಿಧಿಯಿಲ್ಲದೇಅವರು ಕೇಳಿದಷ್ಟು ಹಣ ನೀಡಿ ಗೊಬ್ಬರಖರೀದಿಸುತ್ತಿದ್ದಾರೆ.ಅಂಗಡಿಗಳಲ್ಲಿ 1,700-2,000 ರೂ. ನೀಡಿರಸಗೊಬ್ಬರ ಖರೀದಿಸಬೇಕಿದೆ. ಬಿತ್ತನೆ ಸಮಯದಲ್ಲಿ ಬೆಲೆ ಏರಿಸುತ್ತಿದ್ದು, ಸಕಾಲದಲ್ಲಿ ಗೊಬ್ಬರಸಿಗುತ್ತಿಲ್ಲ ಎಂದು ರೈತ ಚಂದ್ರ ಶೆಟ್ಟಿ ಅಳಲುತೋಡಿಕೊಂಡಿದ್ದಾರೆ.
ಸಹಕಾರ ಸಂಘಕ್ಕೆ ಗೊಬ್ಬರ ಪೂರೈಸಿ: ಸಹಕಾರಸಂಘಗಳ ಮೂಲಕ ರಸಗೊಬ್ಬರ ಮಾರಾಟ ಮಾಡಿದಲ್ಲಿ ರೈತರಿಗೆ ಅನುಕೂಲವಾಗಲಿದೆ. ಖಾಸಗಿಅಂಗಡಿ ಮಾಲಿಕರಿಗೆ ದೊರೆಯುವ ಗೊಬ್ಬರಸಹಕಾರಿ ಸಂಘಗಳಿಗೆ ಏಕೆ ದೊರೆಯುವುದಿಲ್ಲಎಂದು ರೈತರು ಪ್ರಶ್ನಿಸಿದ್ದಾರೆ. ಸಂಬಂಧಪಟ್ಟಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರಿಗೆಸಕಾಲದಲ್ಲಿ ನಿಗದಿತ ಬೆಲೆಗೆ ರಸಗೊಬ್ಬರಸಿಗುವಂತೆ ಕ್ರಮವಹಿಸಬೇಕಿದೆ.
ವಿನೋದ್ ಎನ್.ಗೌಡ