Advertisement
ನಗರದ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್‌ನ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತವತಿಯಿಂದ ಭಾನುವಾರ ನಡೆದ75 ನೇ ಸ್ವಾತಂತ್ರ್ಯದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
Related Articles
Advertisement
ಜಿಲ್ಲೆಯಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ3.30 ಎಕರೆ, ಸ್ಮಶಾನದ ಉದ್ದೇಶಕ್ಕೆ 36 ಎಕರೆ, ಗಣಿಭೂವಿಜ್ಞಾನ ನೂತನ ಕಟ್ಟಡ ನಿರ್ಮಾಣಕ್ಕೆ 2 ಎಕರೆ,ಮ್ಯೂಸಿಯಂ ಸ್ಥಾಪನೆಗೆ 31, ಕೊಳ್ಳೇಗಾಲ ಹಾಗೂಹನೂರುವಿಧಾನಸಭೆ ಕ್ಷೇತ್ರವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ 4ಎಕರೆ,ಜಿಲ್ಲೆಯಲ್ಲಿಪ್ರತ್ಯೇಕಹೆಲಿಪ್ಯಾಡ್‌ನಿರ್ಮಿಸಲು1.20 ಎಕರೆ ಜಮೀನು ನೀಡಲು ಜಿಲ್ಲಾಡಳಿತಮಂಜೂರಾತಿ ನೀಡಿದೆ ಎಂದರು. ಶಿಕ್ಷಣ ಕ್ಷೇತ್ರಕ್ಕೆಸಂಬಂಧಿಸಿದಂತೆ ಜಿಲ್ಲೆಗೆ ಹೊಸದಾಗಿ ಪ್ರತ್ಯೇಕ ವಿವಿಸ್ಥಾಪನೆಗೆ 50 ಎಕರೆ, ಹಂಪಿ ವಿವಿ ನಿಲಯದ ದೇಸಿಅಧ್ಯಯನ ಕೇಂದ್ರಕ್ಕೆ9.36ಎಕರೆ, ಸರ್ಕಾರಿ ಮಹಿಳಾವಸತಿಕಾಲೇಜು ನಿರ್ಮಾಣಕ್ಕೆ4.20ಎಕರೆಜಮೀನುಮಂಜೂರು ಮಾಡಲಾಗಿದೆ ಎಂದರು.
ಅಭಿನಂದನಾ ಪತ್ರ: ಇದಕ್ಕೂ ಮೊದಲು ಸಶಸ್ತ್ರಪಡೆಗಳು ಧ್ವಜ ವಂದನೆ ಸಲ್ಲಿಸಿದವು. ಕೋವಿಡ್‌ಹಿನ್ನೆಲೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆಅವಕಾಶ ಇರಲಿಲ್ಲ. ಇದೇ ವೇಳೆ ಆಯುಷ್ಮಾನ್,ಆರೋಗ್ಯಕರ್ನಾಟಕ ಸೇವೆಯನ್ನು ಉತ್ತಮವಾಗಿನಿರ್ವಹಿಸಿದ ಸಿಮ್ಸ್ ಡೀನ್, ಡಾ.ಎಂ.ಸಂಜೀವ್‌ರೆಡ್ಡಿ, ಸಂತೇಮರಹಳ್ಳಿ ಸಮುದಾಯ ಆರೋಗ್ಯಕೇಂದ್ರದ ಡಾ.ದೇವರಾಜ್, ಕಬ್ಬಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಡಾ.ವೆಂಕಟೇಶ್‌ರಿಗೆ ಅಭಿನಂದನಾ ಪತ್ರ ನೀಡಲಾಯಿತು.
ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ನಗರಸಭೆ ಅಧ್ಯಕ್ಷೆ ಆಶಾ,ಉಪಾಧ್ಯಕ್ಷೆ ಸುಧಾ, ಚುಡಾ ಅಧ್ಯಕ್ಷ ಕೇಂದ್ರಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಪಿ.ಬಿ.ಶಾಂತಮೂರ್ತಿಕುಲಗಾಣ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಹರ್ಷಲ್‌ಬೋಯರ್ ನಾರಾಯಣರಾವ್, ಜಿಲ್ಲಾಪೊಲೀಸ್‌ವರಿಷ್ಠಾಧಿಕಾರಿದಿವ್ಯಾಸಾರಾಥಾಮಸ್,ಎಎಸ್ಪಿ ಸುಂದರ್ ರಾಜ್ ಮತ್ತಿತರರಿದ್ದರು.