Advertisement

ಸ್ವ ಸಹಾಯ ಸಂಘಗಳಿಂದ ಉಳಿತಾಯ ಸಾಧ್ಯ

06:49 PM Jul 26, 2021 | Team Udayavani |

ಚಾಮರಾಜನಗರ: ಸ್ವಸಹಾಯ ಸಂಘಗಳು ಮೂಲಕ ಹಣಉಳಿತಾಯಕ್ಕೆ ಅನುವು ಮಾಡಿಕೊಟ್ಟು ಸದಸ್ಯರನ್ನುಆರ್ಥಿಕವಾಗಿ ಸದೃಢರನ್ನಾಗಿ ಮಾಡುತ್ತವೆ ಎಂದು ನಗರಸಭೆಅಧ್ಯಕ್ಷೆ ಆಶಾ ನಟರಾಜು ಹೇಳಿದರು.

Advertisement

ನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಸಂಸ್ಥೆಯಿಂದ ಕಚೇರಿಯಲ್ಲಿ ಆಯೋಜಿಸಿದ್ದಕಾರ್ಯಕ್ರಮದಲ್ಲಿ ಪಟ್ಟಣ ಪೊಲೀಸ್‌ ಠಾಣೆಗೆ ಕಂಪ್ಯೂಟರ್‌ವಿತರಣೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳಿಗೆಲಾಭಾಂಶ ನೀಡಿಕೆ ಮತ್ತು ವಡ್ಡಗಲ್‌ಪುರ ಹಾಲುಉತ್ಪಾದಕರ ಸಹಕಾರ ಸಂಘಕ್ಕೆ ಅನುದಾನ ವಿತರಣೆಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನೆಯಲ್ಲಿಹಣ ಕೂಡಿಡಲು ಸಾಧ್ಯವಾಗದು. ಸ್ವಸಹಾಯ ಸಂಘಗಳಿಂದಉಳಿತಾಯ ಸಾಧ್ಯ.

ಜತೆಗೆ ಲಾಭಾಂಶವನ್ನುಹಂಚಿಕೊಳ್ಳಬಹುದು. ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವನಿಟ್ಟಿನಲ್ಲಿ ಹಲವಾರು ಮೆಚ್ಚುಗೆಯ ಕಾರ್ಯಕ್ರಮ ನಡೆಸುತ್ತಾಬಂದಿದೆ. ಕೋವಿಡ್‌ ಸಂದರ್ಭದಲ್ಲಿ ಬಡಮಕ್ಕಳ ಆನ್‌ಲೈನ್‌ಶಿಕ್ಷಣಕ್ಕೆ ಅನುಕೂಲವಾಗಲೆಂದು ಟ್ಯಾಬ್‌ನೀಡಲಾಯಿತು ಎಂದರು.

ಇದೇ ವೇಳೆ ಪಟ್ಟಣ ಪೊಲೀಸ್‌ ಠಾಣೆಗೆ ಕಂಪ್ಯೂಟರ್‌ವಿತರಿಸಲಾಯಿತು. ತಾಲೂಕಿನ ವಡ್ಡಗಲ್‌ಪುರ ಹಾಲುಉತ್ಪಾದಕ ಸಹಕಾರ ಸಂಘಕ್ಕೆ ಅನುದಾನ ನೀಡಲಾಯಿತು.ಇನ್ಸ್‌ಪೆಕ್ಟರ್‌ ವೆಂಕಟೇಶ್‌, ಜನಜಾಗೃತಿ ವೇದಿಕೆ ಅಧ್ಯಕ್ಷಕೆ.ಸಿ. ರಾಜಶೇಖರ ಆರಾಧ್ಯ, ಜಿÇÉಾ ಧಾರ್ಮಿಕ ಪರಿಷತ್ತಿನಸದಸ್ಯ ಚಿಕ್ಕರಾಜು, ಯೋಜನೆಯ ಜಿÇÉಾ ನಿರ್ದೇಶಕಿಲೀಲಾವತಿ, ಯೋಜನಾಕಾರಿ ಗಣಪತಿ, ಮೇಲ್ವಿಚಾರಕರಾಜೇಶ್‌, ಕ್ಷೇತ್ರ ಯೋಜನಾಕಾರಿ ಹರೀಶ್‌ ಕುಮಾರ್‌,ಶ್ರುತಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next