Advertisement

ಚಾ.ನಗರದಲ್ಲಿ ಪ್ರತ್ಯೇಕ ವಿವಿ ಸ್ಥಾಪನೆಗೆ ಜಿಲ್ಲಾಡಳಿತ ಸಹಕಾರ: ಡೀಸಿ

06:54 PM Jul 18, 2021 | Team Udayavani |

ಚಾಮರಾಜನಗರ: ಚಾಮರಾಜನಗರ ಜಿಲ್ಲೆಗೆಪ್ರತ್ಯೇಕ ಹೊಸ ವಿಶ್ವವಿದ್ಯಾನಿಲಯ ಸ್ಥಾಪನೆಗೆಸರ್ಕಾರ ಉದ್ದೇಶಿಸಿದ್ದು ಈ ಸಂಬಂಧಅಗತ್ಯವಿರುವ ಎಲ್ಲ ನೆರವು ಹಾಗೂ ಸಹಕಾರವನ್ನುಜಿಲ್ಲಾಡಳಿತದಿಂದ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರದಸಮೀಪವಿರುವ ಮೈಸೂರು ವಿ.ವಿಯ ಡಾ.ಬಿ.ಆರ್‌. ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದಲ್ಲಿನೂತನ ವಿಶ್ವವಿದ್ಯಾನಿಲಯ ಸ್ಥಾಪನೆ ಸಂಬಂಧನಡೆದ ತಜ್ಞರ ಸಮಿತಿ ಸಭೆಯಲ್ಲಿ ಮಾತನಾಡಿದರು.ಜಿಲ್ಲೆಯಲ್ಲಿ ಪ್ರತ್ಯೇಕ ನೂತನ ವಿಶ್ವವಿದ್ಯಾನಿಲಯಸ್ಥಾಪಿಸುವ ಐತಿಹಾಸಿಕ ನಿರ್ಧಾರತೆಗೆದುಕೊಳ್ಳಲಾಗಿದೆ. ಜಿಲ್ಲೆಗೆ ತನ್ನದೇ ಆದ ಹೊಸವಿಶ್ವವಿದ್ಯಾಲಯ ಅತ್ಯವಶ್ಯಕವಾಗಿತ್ತು.

ಜಾನಪದ,ಮಹದೇಶ್ವರರ ಮಹಾಕಾವ್ಯ, ಸಾಂಸ್ಕೃತಿಕ, ಅರಣ್ಯಸಂಪತ್ತು, ಹುಲಿ ಸಂರಕ್ಷಿತ ಪ್ರದೇಶಗಳು ಸೇರಿದಂತೆಹಲವು ವೈಶಿಷ್ಟ Âಗಳನ್ನು ಹೊಂದಿರುವ ಚಾಮರಾಜನಗರ ಜಿಲ್ಲೆ ತಮಿಳುನಾಡು ಮತ್ತುಕೇರಳ ಸಂಪರ್ಕಸಾಧಿಸುವ ಜಿಲ್ಲೆಯಾಗಿದೆ ಎಂದರು.ಕೌಶಲ ಹಾಗೂ ಗಿರಿಜನರ ವಿಷಯಗಳನ್ನುಒಳಗೊಂಡ ವಿಶೇಷ ವಿಶ್ವವಿದ್ಯಾಲಯವನ್ನಾಗಿಜಿಲ್ಲೆಯಲ್ಲಿ ನೂತನ ವಿಶ್ವವಿದ್ಯಾಲಯವನ್ನುರೂಪಿಸಲು ಅವಕಾಶವಿದೆ.

ವೃತ್ತಿ ಆಧಾರಿತ ಕೋಸ್‌ìಗಳನ್ನು ಆರಂಭಿಸಬಹುದು. ಉತ್ಕೃಷ್ಟವಾದಗ್ರಾನೈಟ್‌ (ಕಪ್ಪು ಶಿಲೆ)ಗೆ ಹೆಸರಾದ ನಮ್ಮ ಜಿಲ್ಲೆಯಲ್ಲಿಕೌಶಲ್ಯದ ಕೊರತೆಯಿಂದ ಇದಕ್ಕೆ ಸಂಬಂಧಿಸಿದಉದ್ಯೋಗಕ್ಕೆಬೇರೆಯವರನ್ನುಅವಲಂಬಿಸಬೇಕಿದೆ.ಸ್ಥಳೀಯರಿಗೆ ಕೌಶಲ ನೀಡಿ ಉದ್ಯೋಗ ನೀಡಬಹುದು. ಸೋಲಿಗರು ಕಾಫಿ ಬೆಳೆಯುವವಷ್ಟುಸಮರ್ಥರಾಗಿದ್ದಾರೆ. ಇಂತಹ ಗಮನಸೆಳೆಯುವಹಲವಾರು ವಿಷಯಗಳು ಜಿಲ್ಲೆಯಲ್ಲಿವೆ ಎಂದರು.

ಜಿಲ್ಲಾಡಳಿತದಿಂದ ನೂತನ ವಿಶ್ವವಿದ್ಯಾನಿಲಯಕ್ಕೆಅಗತ್ಯವಿರುವ ಹೆಚ್ಚುವರಿ ಭೂಮಿಯನ್ನುಗುರುತಿಸಲು ಚಾಮರಾಜನಗರ ತಾಲೂಕಿನಭಾಗದಲ್ಲಿ ಲಭ್ಯವಿರುವ ಕಡೆಪರಿಶೀಲಿಸಲಾಗುವುದು. ತಾವು ಸಹ ಭೇಟಿ ನೀಡಿವೀಕ್ಷಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆನೀಡುವುದಾಗಿ ತಿಳಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ತಹಶೀಲ್ದಾರರಾದ ಚಿದಾನಂದಗುರುಸ್ವಾಮಿ, ರವಿಶಂಕರ್‌, ಬೆಂಗಳೂರು ಉತ್ತರವಿಶ್ವವಿದ್ಯಾನಿಲಯದ ಕುಲಪತಿಹಾಗೂ ಸಮಿತಿಯಸದಸ್ಯರಾದ ಪೊ›.ಟಿ.ಡಿ.ಕೆಂಪರಾಜು,ಅಂಬೇಡ್ಕರ್‌ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕಪೊ›.ಶಿವಬಸವಯ್ಯ,ಮೈಸೂರುವಿÍವಿದ್ಯಾ ‌Ì ಲಯದಸಿಂಡಿಕೇಟ್‌ ಸದಸ್ಯ ಪ್ರದೀಪ್‌ ಕುಮಾರ್‌ ದೀಕ್ಷಿತ್‌,ಎÓràಟೆ … ಆಫೀಸರ್‌ ಜಯರಾಂ, ಪಿ.ಎಂ.ಇ.ಬೋರ್ಡ್‌ನ ಚೇರ್‌ವೆುನ್‌ ಲೋಕ್‌ನಾಥ್‌,ಕಾರ್ಯಪಾಲಕ ಎಂಜಿನಿಯರ್‌ ಕುಮಾರ್‌,ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಿರೀಶ್‌ಜಿಲ್ಲೆಯಇತರೆಇಲಾಖೆಗಳಅಧಿಕಾರಿಗಳುಸಭೆಯಲ್ಲಿ ಹಾಜರಿದ್ದರು. ಸಭೆಗೂ ಮೊದಲುತಜ್ಞರ ಸಮಿತಿಯು ಡಾ. ಬಿ.ಆರ್‌. ಅಂಬೇಡ್ಕರ್‌ಸ್ನಾñಕೊ‌¤ àತ್ತರ ಕೇಂದ್ರಕ್ಕೆ ಭೇಟಿ ನೀಡಿ ಮೂಲಸೌಕರ್ಯಗಳನ್ನು ಪರಿಶೀಲಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next