ಚಾಮರಾಜನಗರ: ಗುಂಡ್ಲುಪೇಟೆತಾಲೂಕಿನ ತೆರಕಣಾಂಬಿ ರೈತ ಸಂಪರ್ಕಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿಶುಕ್ರವಾರ ದಿಢೀರ್ ಭೇಟಿ ನೀಡಿ ಬಿತ್ತನೆಬೀಜ, ರಸಗೊಬ್ಬರ ಇತರೆ ದಾಸ್ತಾನುಪರಿಶೀಲಿಸಿದರು.
ಬೇಡಿಕೆಯಿರುವ ಕೆಲಬಿತ್ತನೆಬೀಜಗಳುದಾಸ್ತಾನುಮುಗಿದಿದ್ದರೂಬೇಡಿಕೆ ಸಲ್ಲಿಸದ ಕಾರಣ ಸಿಬ್ಬಂದಿಯನ್ನುತರಾಟೆಗೆ ತೆಗೆದುಕೊಂಡರು.ಯಾವ ಯಾವ ಬಗೆಯ ಬಿತ್ತನೆ ಬೀಜಗಳಿಗೆ ಬೇಡಿಕೆಯಿದೆ? ಪ್ರಸ್ತುತ ದಾಸ್ತಾನುಮಾಡಲಾಗಿರುವ ಬಿತ್ತನೆ ಬೀಜಗಳಿಗೆಯಾವ ಮಟ್ಟದಲ್ಲಿ ಬೇಡಿಕೆಯಿದೆ ಎಂಬಬಗ್ಗೆ ಪೂರ್ಣ ಪ್ರಮಾಣದಲ್ಲಿ ವಿವರಪಡೆದರು.
ಬೇಡಿಕೆ ಹೆಚ್ಚಾಗಿರುವ ರಾಗಿಮತ್ತು ಅಲಸಂದೆ ಬಿತ್ತನೆಬೀಜಗಳದಾಸ್ತಾನು ಮುಗಿದಿದ್ದರೂ ಸಹ ಬೇಡಿಕೆಸಲ್ಲಿಸದೇ ಇರುವ ಬಗ್ಗೆ ತೀವ್ರ ತರಾಟೆಗೆತೆಗೆದುಕೊಂಡರು. ರೈತರಿಗೆ ಅಗತ್ಯವಿರುವಹಾಗೂ ಬೇಡಿಕೆ ಹೆಚ್ಚಿರುವಬಿತ್ತನೆ ಬೀಜಗಳನ್ನು ಖರೀದಿಸುವಂತೆಸೂಚನೆ ನೀಡಿದರು
.ರೈತರು ಪ್ರತಿದಿನ ಖರೀದಿಸುತ್ತಿರುವ ಬಿತ್ತನೆಬೀಜ ಇತರೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಪರಿಕರಗಳ ಕುರಿತವಹಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚನೆ ನೀಡಿದರು. ರೈತಸಂಪರ್ಕ ಕೇಂದ್ರದಲ್ಲಿ ಸಂಗ್ರಹವಾಗುವಶುಲ್ಕವನ್ನು ಆಯಾ ದಿನವೇ ಬ್ಯಾಂಕಿಗೆಜಮಾ ಮಾಡದೇ ಇರುವುದನ್ನು ಗಮನಿಸಿದ ಜಿಲ್ಲಾಧಿಕಾರಿಯವರು ವಿಳಂಬವಾಗಿಜಮೆ ಮಾಡುತ್ತಿರುವ ಬಗ್ಗೆ ತೀವ್ರವಾಗಿಪ್ರಶ್ನಿಸಿದರು.
ಇಂತಹ ಲೋಪಗಳಿಗೆಅವಕಾಶವಾಗುವುದನ್ನುಸಹಿಸಲಾಗುವುದಿಲ್ಲವೆಂದು ಎಚ್ಚರಿಕೆ ನೀಡಿದರು.ಕಚೇರಿಯ ಹಾಜರಾತಿಯನ್ನುಪರಿಶೀಲಿಸಿದರು. ಹೊರಗುತ್ತಿಗೆಯಡಿಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯಹಾಜರಾತಿಯನ್ನು ಸಮರ್ಪಕವಾಗಿನಿರ್ವಹಿಸುವಂತೆ ಸೂಚಿಸಿದರು. ಈ ವೇಳೆತಹಶೀಲ್ದಾರ್ ರವಿಶಂಕರ್ ಇತರರಿದ್ದರು.