ಯಳಂದೂರು: ಕಳೆದ ಎರಡು ಶೈಕ್ಷಣಿಕವರ್ಷಗಳಿಂದ ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ ಇರುವುದರಿಂದ ವಿದ್ಯಾಥಿಗಳ ಬೌದ್ಧಿಕ, ಶೈಕ್ಷಣಿಕ ಮಟ್ಟದ ಮೇಲೆಬಹಳಷ್ಟು ಪರಿಣಾಮ ಬೀರು ತ್ತಿದ್ದು, ಈಬಗ್ಗೆ ಶಿಕ್ಷಣ ತಜ್ಞರು ಎಚ್ಚರಿಸಿದ್ದಾರೆ.ಹೀಗಾಗಿ ಶಿಕ್ಷಕರು, ಪೋಷಕರು ಮಕ್ಕಳಕಲಿಕೆ ಬಗ್ಗೆ ನಿಗಾ ವಹಿಸಿ ಎಂದು ಶಿಕ್ಷಣಇಲಾಖೆಯ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ (ಡಿವೈಸಿಸಿ ) ಪಿ.ಮಂಜುನಾಥ್ ಮಾಹಿತಿ ನೀಡಿದರು.
ತಾಲೂಕಿನ ಕಂದಹಳ್ಳಿ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಕೋವಿಡ್ ಪರಿಣಾಮದೇಶದಲ್ಲಿ ಎಲ್ಲಾ ಚಟುವಟಿಕೆಗಳ ಮೇಲೂಕೋವಿಡ್ ಕರಿ ನೆರಳು ಬೀರಿರುವಪರಿಣಾಮ ಹೊಡೆತ ಉಂಟಾಗಿದೆ. ಇದುಶಿಕ್ಷಣ ಕ್ಷೇತ್ರದ ಮಕ್ಕಳ ಕಲಿಕೆ ಪ್ರಕ್ರಿಯೆಮೇಲೂ ಪರಿಣಾಮ ಬೀರಿದೆ.
ಹೀಗಾಗಿಕೋವಿಡ್ ಇನ್ನೂ 5 ವರ್ಷಗಳ ಕಾಲನಡುವೆಯೇ ಸೆಣಸಾಡಿ ಎದುರಿಸಬೇಕಿದೆಎಂದರು.ಅಗತ್ಯ ಮುನ್ನೆಚ್ಚರಿಕೆ ಕ್ರಮಗಳಾದಮಾಸ್ಕ್, ಸ್ಯಾನಿಟೈಸರ್, ವೈಯಕ್ತಿಕ ಅಂತರ,ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಹೋಗುವಮೂಲಕ ಶಿಕ್ಷಕರು ಕಾರ್ಯನಿರ್ವಹಿಸಬೇಕಾಗಿದೆ.
‘ಜೊತೆಗೆ ಮಕ್ಕಳ ಕಲಿಕೆ ಬಗ್ಗೆಪೋನ್ ಮೂಲಕ ಕರೆಗಳ ಮಾಡಿಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸಿ, ಆನ್‌ಲೈನ್ ಹಾಗೂ ಆಫ್ಲೈನ್ ಮೂಲಕ ಪಾಠಚಟುವಟಿಕೆಗಳ ಬಗ್ಗೆ ಸಕ್ರಿಯವಾಗಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಮನೆಗಳಲ್ಲಿ ಅಭ್ಯಾಸ, ಕಲಿಕೆಯ ಕೆಲಸಗಳನ್ನುನಿರಂತರವಾಗಿ ಮಾಡಿಸಬೇಕು. ಮಕ್ಕಳನ್ನುಸದಾ ಕಾಲ ಪಾಠ ಬೋಧನೆಯಲ್ಲಿ ಚಟುವಟಿಕೆಯಿಂದ ಕೂಡಿರುವ ರೀತಿಯಲ್ಲಿಕಾರ್ಯನಿರ್ವಹಿಸಬೇಕು ಎಂದು ಕಿವಿಮಾತುಹೇಳಿದರು. ಈ ವೇಳೆ ಮುಖ್ಯ ಶಿಕ್ಷಕಿಶಶಿರೇಖಾ, ಶಿಕ್ಷಕರಾದ ರಾಜೇಶ್ ಇದ್ದರು.