Advertisement

ಸಿಎಂ ಆಶಯ ವ್ಯಕ್ತಪಡಿಸಿದ ಯತ್ನಾಳ್

06:16 PM Jul 07, 2021 | Team Udayavani |

ಚಾಮರಾಜನಗರ: ಚಾ.ನಗರಕ್ಕೆಮುಖ್ಯಮಂತ್ರಿ ಭೇಟಿ ನೀಡುತ್ತಿಲ್ಲ.ಅಧಿಕಾರ ಹೋಗುತ್ತದೆಂಬಭಯವಿದೆ. ಹಿಂದಿನ ಮುಖ್ಯಮಂತ್ರಿಸಿದ್ದರಾಮಯ್ಯ ಚಾ.ನಗರಕ್ಕೆಹಲವಾರು ಬಾರಿ ಬಂದು 5 ವರ್ಷಆಡಳಿತ ನಡೆಸಲಿಲ್ಲವೇ? ಎಂದುಶಾಸಕ ಬಸವನಗೌಡ ಪಾಟೀಲ್‌ಯತ್ನಾಳ್‌ ಟೀಕಿಸಿದರು.

Advertisement

ಹಿಂದೆ ರೈಲ್ವೆ ರಾಜ್ಯ ಸಚಿವನಾಗಿದ್ದಾಗಚಾ.ನಗರಕ್ಕೆ ಬಂದಿದ್ದೆ. ಮತ್ತೆಶಾಸಕನಾಗಿ ಗೆದ್ದು ಬಂದಿದ್ದೇನೆ.ಚಾ.ನಗರದ ಹರಳುಕೋಟೆ ಆಂಜನೇಯದೇವಾಲಯಕ್ಕೆಮಂಗಳವಾರ ಭೇಟಿ ನೀಡಿ ಹನುಮನ ದರ್ಶನಮಾಡಿದ್ದೇನೆ.

ಚಾ.ನಗರ ಜಿಲ್ಲೆಯಿಂದನನ್ನ ರಾಜಕೀಯ ಜೀವನಉತ್ತುಂಗಕ್ಕೇರಲಿದೆ. ಕಾಲ ಕೂಡಿಬಂದರೆ ನಾನೂ ಚಾ.ನಗರಕ್ಕೆಬರುತ್ತೇನೆ ಎಂದು ಯತ್ನಾಳ್‌ಪರೋಕ್ಷ ವಾಗಿ ಮುಖ್ಯ ಮಂತ್ರಿಯಾಗುವ ಆಶಯ ವ್ಯಕ್ತಪಡಿಸಿದರು.

ಚಾ.ನಗರಕ್ಕೆ ಭೇಟಿ ನೀಡಿದಮುಖ್ಯಮಂತ್ರಿಗಳು ಅಧಿಕಾರಕಳೆದುಕೊಳ್ಳುತ್ತಾರೆ ಎಂಬ ಭಯಈಗಲೂ ಇದೆ. ಆದರೆಸಿದ್ದರಾಮಯ್ಯ ಹಲವಾರು ಬಾರಿಚಾ.ನಗರಕ್ಕೆ ಬಂದು ಹೋಗಿದ್ದಾರೆ,ಅವರು 5 ವರ್ಷವನ್ನುಸಮಸ್ಯೆಯಿಲ್ಲದೇ ಉತ್ತಮವಾಗಿಮುಖ್ಯಮಂತ್ರಿ ಹುದ್ದೆ ನಿರ್ವಹಿಸಿದ್ದಾರೆ.

ಹಿರಿಯ ಸಚಿವರಾದ ಕೆ.ಎಸ್‌. ನಾಗರತ್ಮಮ್ಮ, ಎಂ.ಮಹದೇವು. ಎಂ.ರಾಜಶೇಖರಮೂರ್ತಿ ಯಂತಹರಾಜಕೀಯ ಮುತ್ಸದ್ದಿಗಳನ್ನು ಕೊಟ್ಟಚಾ.ಮರಾಜನಗರ ಪುಣ್ಯದ ಭೂಮಿ ಎಂದರು.

Advertisement

ಚಾ.ಜನಗರಕ್ಕೆಭೇಟಿನೀಡುವುದರಿಂದನಾನು ಉತ್ತುಂಗಕ್ಕೇರುತ್ತೇನೆಯೇ ಹೊರತು ಅಧಿಕಾರಕಳೆದುಕೊಳ್ಳುವುದಿಲ್ಲ. ನನ್ನ ವಿರುದ್ಧಕೆಲವರು ಅಪಪ್ರಚಾರ ಮಾಡಿದರು.

ಆದರೂ ನಾನು ಬಗ್ಗಲಿಲ್ಲ.ಮುಖ್ಯಮಂತ್ರಿಗಳ ಗೃಹಕಚೇರಿಕೃಷ್ಣಾಕ್ಕೆ ಭೇಟಿನೀಡಿ, ಒಂದುವರ್ಷಮೂರುತಿಂಗಳು ಆಗಿದೆ, ನನ್ನಕ್ಷೇತ್ರದಅಭಿವೃದ್ಧಿಗೆ ಬೇಕಾದ ಅನುದಾನ ಲಭ್ಯವಾಗುತ್ತಿದೆ ಎಂದರು.

ಪಂಚಮಸಾಲಿ ಲಿಂಗಾಯತ,ಹಳೇಮೈಸೂರು ಪ್ರಾಂತ್ಯದ ಗೌಡಲಿಂಗಾಯಿತ ಸಮುದಾಯದವರುಹಿಂದುಳಿದಿದ್ದು, ಇವರ ಜೀವನವೇದುಸ್ತರವಾಗಿದೆ. ಸಮುದಾಯದಮಕ್ಕಳು ಶೈಕ್ಷಣಿಕ ಅಭಿವೃದ್ಧಿಯಾಗಲುಉನ್ನತಮಟ್ಟದ ಉದ್ಯೋಗಗಳಿಸಲುಸಮುದಾಯವನ್ನು ಪ್ರವರ್ಗ-2 ಎಗೆಸೇರಿಸÛಬೇಕು. ಎಂದರು.

ಹೋರಾಟಮಾಡುವವರನು °ದಾರಿತಪ್ಪಿಸುವ ಕೆಲಸ ನಡೆಯುತ್ತಲೇಇರುತ್ತದೆ, ನಮ್ಮ ಹೋರಾಟಏನಿದ್ದರೂ ಸಮುದಾಯದಅಭಿವೃದ್ಧಿಗಾಗಿ, ಆದರೂ ಸಮಾಜಒಡೆಯುವ ತಂತ್ರ ನಡೆಯುತ್ತಿದೆ.ಇದಕ್ಕೆ ಸಮುದಾಯದವರುಆಸ್ಪದ ಕೊಡದೇ ನಮ್ಮ ಹೋರಾಟಕ್ಕೆನಿಮ್ಮ ಬೆಂಬಲಬೇಕು ಎಂದುಕೋರಿದರು

Advertisement

Udayavani is now on Telegram. Click here to join our channel and stay updated with the latest news.

Next