Advertisement

ಗ್ರಾಮಸ್ಥರು ಮುಂದೆ ನಿಂತು ಗುಣಮಟ್ಟದ ಕಾಮಗಾರಿ ನಡೆಸಿ

08:16 PM Jul 03, 2021 | Team Udayavani |

ಚಾಮರಾಜನಗರ: ತಾಲೂಕಿನಶಿವಪುರ ಗ್ರಾಮಪಂಚಾಯಿತಿವ್ಯಾಪ್ತಿಯ ಕಡುವಿನಕಟ್ಟೆ ಹುಂಡಿಗ್ರಾಮದಲ್ಲಿ 65 ಲಕ್ಷ ರೂ.ವೆಚ್ಚದ ರಸ್ತೆಮತ್ತುಚರಂಡಿಅಭಿವೃದ್ಧಿಕಾಮಗಾರಿಗೆಶಾಸಕ ಸಿ.ಪುಟ್ಟರಂಗಶೆಟ್ಟಿ ಶುಕ್ರವಾರಭೂಮಿಪೂಜೆ ನೆರವೇರಿಸಿದರು.

Advertisement

ಈ ವೇಳೆ ಮಾತನಾಡಿ, ಕ್ಷೇತ್ರವ್ಯಾಪ್ತಿಯ ಹಲವು ಗ್ರಾಮಗಳ ಬಡಾವಣೆಗಗಳಿಗೆ ರಸ್ತೆ ಸೇರಿದಂತೆ ಸುಸಜ್ಜಿತಚರಂಡಿ ನಿರ್ಮಿಸಲಾಗಿದೆ. ಮುಂದಿನದಿನಗಳಲ್ಲಿ ರಸ್ತೆ ಮತ್ತು ಚರಂಡಿ ಸೌಲಭ್ಯಇಲ್ಲದಿರುವ ಗ್ರಾಮಗಳಿಗೂ ರಸ್ತೆಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸಲಾಗುವುದು ಎಂದರು.

ಗ್ರಾಮಸ್ಥರು ಮುಂದೆ ನಿಂತುಚರಂಡಿ ಮತ್ತು ಗುಣಮಟ್ಟದ ರಸ್ತೆನಿರ್ಮಿಸಿಕೊಳ್ಳಬೇಕು, ಸಂಬಂಧಪಟ್ಟಗುತ್ತಿಗೆದಾರರು ನಿಗದಿತ ಅವಧಿಯಲ್ಲಿಕಾಮಗಾರಿ ಪೂರ್ಣಗೊಳಿಸಬೇಕುಎಂದು ಸೂಚಿಸಿದರು.ಇದೇ ವೇಳೆ ಗ್ರಾಮದಲ್ಲಿ 30 ಲಕ್ಷರೂ.ವೆಚ್ಚದಲ್ಲಿನಿರ್ಮಾಣವಾಗುತ್ತಿರುವಕನಕಭವನ ಕಟ್ಟಡದ ಕಾಮಗಾರಿಯನ್ನು ಶಾಸಕರು ವೀಕ್ಷಿಸಿದರು.

ಕನಿಷ್ಠ ವೇತನ ಸಲಹಾಮಂಡಳಿಮಾಜಿ ಅಧ್ಯಕ್ಷ ಉಮೇಶ್‌, ಗ್ರಾಪಂಅಧ್ಯಕ್ಷೆ ನಾಗಮಣಿ, ಉಪಾಧ್ಯಕ್ಷ ಶಿವಕುಮಾರ್‌, ಸದಸ್ಯರಾದ ಕುಮಾರಸ್ವಾಮಿ, ಇಂದ್ರಮ್ಮ, ಜಯಲಕ್ಷ್ಮೀ, ಮಾಜಿ ಅಧ್ಯಕ್ಷ ಕುಮಾರ್‌, ಮುಖಂಡರಾದ ನಾಗರಾಜು, ಶಿವಣ್ಣ, ಪಿಡಬ್ಲೂ Âಡಿ ಎಇಇ ಮಾದೇಶ್‌,ಎಂಜಿನಿಯರ್‌ ರೇಣುಕಾ ಸೇರಿದಂತೆಗ್ರಾಮಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next