Advertisement

ಮಾದಪ್ಪನ ಬೆಟ್ಟದಲ್ಲಿ ಹಲವು ಸೇವೆಗಳಿಗೆ ಅವಕಾಶ

05:56 PM Jul 25, 2021 | Team Udayavani |

ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿಭಕ್ತಾದಿಗಳಿಗೆ ವಿಧಿಸಲಾಗಿದ್ದ ಹಲವುನಿರ್ಬಂಧಗಳಿಗೆ ಸಡಿಲಿಕೆ ನೀಡಲಾಗಿದ್ದು ಭಾನುವಾರದಿಂದ ಅಭಿಷೇಕ, ಉತ್ಸವ,ಬಂಗಾರ ರಥೋತ್ಸವ, ಮುಡಿ ಸೇವೆ ಸೇರಿದಂತೆಹಲವು ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

Advertisement

ಕೊರೊನಾ ಲಾಕ್‌ಡೌನ್‌ ಹಿನ್ನೆಲೆದೇವಾಲಯಗಳಲ್ಲಿ ಹಲವು ಸೇವೆಗಳಿಗೆನಿರ್ಬಂಧ ವಿಧಿಸಿ ಕೇವಲ ದರ್ಶನಕ್ಕೆ ಮಾತ್ರಅವಕಾಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆ ಸರ್ಕಾರದಕಂದಾಯ ಇಲಾಖೆಯ ಪ್ರಧಾನಕಾರ್ಯದರ್ಶಿಗಳು ಹಲವು ಸಡಿಲಿಕೆಗಳನ್ನುನೀಡಿದ್ದಾರೆ. ಈ ಹಿನ್ನೆಲೆ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಕೋವಿಡ್‌ ನಿಯಮಮತ್ತು ಮಾರ್ಗಸೂಚಿಯೊಂದಿಗೆ ಭಾನುವಾರದಿಂದಲೇ ಹಲವು ಸೇವೆಗಳಿಗೆ ಅವಕಾಶಕಲ್ಪಿಸಲಾಗಿದೆ.

ಲಭ್ಯವಿರುವ ಸೇವೆಗಳು: ಮಲೆ ಮಹದೇಶ್ವರಬೆಟ್ಟದಲ್ಲಿ ಶನಿವಾರದವರೆಗೂ ಭಕ್ತಾದಿಗಳದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.ಇದೀಗ ನೂತನ ಮಾರ್ಗಸೂಚಿಪ್ರಕಟವಾಗಿರುವ ಹಿನ್ನೆಲೆ ದರ್ಶನದ ಜೊತೆಗೆಹಣ್ಣುಕಾಯಿ ಪೂಜೆ, ಮಹಾಮಂಗಳಾರತಿ,ರುದ್ರಾಭಿಷೇಕ ಸೇವೆಗಳಿಗೆ ಅವಕಾಶಕಲ್ಪಿಸಲಾಗಿದೆ. ಪ್ರತಿನಿತ್ಯ ರಾತ್ರಿ 7 ಗಂಟೆಗೆಜರುಗುತ್ತಿದ್ದ ಬಂಗಾರದ ರಥೋತ್ಸವಕ್ಕೂಅವಕಾಶ ಕಲ್ಪಿಸಲಾಗಿದ್ದು, ಈ ಸೇವೆಗೆಪ್ರತಿದಿನ 100 ಜನರಿಗೆ ಮಾತ್ರ ಅವಕಾಶಕಲ್ಪಿಸಲಾಗಿದ್ದು ಮೊದಲ ಬಂದವರಿಗೆಆದ್ಯತೆ ಮತ್ತು ಆನ್‌ಲೈನ್‌ ಬುಕ್ಕಿಂಗ್‌ಮಾಡಿದವರಿಗೆ ಮೊದಲು ಅವಕಾಶನೀಡಲಾಗುತ್ತಿದೆ.

ಅಲ್ಲದೆ ದೇವಾಲಯದ ಪ್ರಾಂಗಣದಲ್ಲಿಜರುಗುತ್ತಿದ್ದ ಹುಲಿವಾಹನೋತ್ಸವ, ಬಸವವಾನೋತ್ಸವ ಮತ್ತು ರುದ್ರಾಕ್ಷಿ ಮಂಟಪೋತ್ಸವಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಭಕ್ತಾದಿಗಳಮುಡಿಸೇವೆಗೂ ಅವಕಾಶ ಕಲ್ಪಿಸಲಾಗಿದ್ದುಲಾಡು ಪ್ರಸಾದ ವಿತರಣೆಗೂ ಅವಕಾಶಕಲ್ಪಿಸಲಾಗಿದೆ. ಇದಲ್ಲದೆ ಪ್ರಾಧಿಕಾರದಪೆಟ್ರೋಲ್‌ ಬಂಕ್‌ ಸಹ ತೆರೆಯಲಾಗುತ್ತಿದೆ.ಅಲ್ಲದೆ ಕೊಳ್ಳೇಗಾಲದ ಮಲೆ ಮಹದೇಶ್ವರಕಲ್ಯಾಣ ಮಂಟಪದ ಕೋವಿಡ್‌ನಿಯಮಾವಳಿಗಳೊಂದಿಗೆ ಕಾಯ್ದಿರಿಸಲು ಸಹಅವಕಾಶ ಕಲ್ಪಿಸಲಾಗಿದ್ದು, ಪ್ರಾಧಿಕಾರದ ಬಸ್‌ಸೇವೆಗಳು ಆಗಸ್ಟ್‌ 1 ರಿಂದಪ್ರಾರಂಭಗೊಳ್ಳಲಿವೆ.

ಪ್ರಾಧಿಕಾರಕ್ಕೆ ಸಂಬಂಧಿಸಿದ ಯಾವುದೇಸಂದೇಹಗಳಿಗೆ ಭಕ್ತಾದಿಗಳು ಸಹಾಯವಾಣಿಸಂಖ್ಯೆ 18604254850 ಸಂಪರ್ಕಿಸುವಂತೆಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next