ಚಾಮರಾಜನಗರ: ಜಿಲ್ಲೆಯಲ್ಲಿ ಮಂಗಳವಾರ 8 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 5 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 42 ಪ್ರಕರಣಗಳು ಸಕ್ರಿಯವಾಗಿವೆ.
ಸೋಮವಾರ ಕಡಿಮೆ ಸಂಖ್ಯೆಯ ಅಂದರೆ 397 ಗಂಟಲು ದ್ರವ ಮಾದರಿ ಪರೀಕ್ಷೆಗಳನ್ನು ನಡೆಸಿದ್ದರಿಂದಾಗಿ ಒಂದೂ ಪ್ರಕರಣ ಪತ್ತೆಯಾಗಿರಲಿಲ್ಲ. ಪ್ರತಿನಿತ್ಯ ಮಾಡುವ ಮೂರನೇ ಒಂದು ಭಾಗದಷ್ಟು ಪರೀಕ್ಷೆಗಳನ್ನಷ್ಟೇ ನಡೆಸಿ ಇಂದು ಒಂದು ಪ್ರಕರಣವೂ ವರದಿಯಾಗಿಲ್ಲ ಎಂಬ ಹೇಳಿಕೆಯನ್ನು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯಿಂದ ನೀಡಲಾಗಿತ್ತು.
ಆದರೆ ಮಂಗಳವಾರ ಎಂದಿನಂತೆ ಪರೀಕ್ಷೆ ನಡೆಸಿದ್ದರಿಂದ 8 ಪ್ರಕರಣಗಳು ಪತ್ತೆಯಾಗಿವೆ. ಮಂಗಳವಾರ ಒಟ್ಟು 1327 ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಯಿತು. ಇದರಲ್ಲಿ 5 ಪ್ರಕರಣ ದೃಢಪಟ್ಟಿವೆ. ಅಲ್ಲದೇ ಮೈಸೂರಿನಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಜಿಲ್ಲೆಯ 2 ಹಾಗೂ ಮಂಡ್ಯದಲ್ಲಿ ಜಿಲ್ಲೆಯ 1 ಪ್ರಕರಣ ದೃಢಪಟ್ಟಿದೆ. ಕೊಳ್ಳೇಗಾಲ ತಾಲೂಕಿನ 5 ಮಂದಿಗೆ ಹಾಗೂ ಚಾ.ನಗರ, ಗುಂಡ್ಲುಪೇಟೆ, ಯಳಂದೂರು ತಾಲೂಕಿನ ತಲಾ ಓರ್ವರಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಇದುವರೆಗೆ 6663 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 6836 ಮಂದಿಗೆ ಸೋಂಕು ದೃಢಪಟ್ಟಿತ್ತು. 131 ಸೋಂಕಿತರು ಮೃತಪಟ್ಟಿದ್ದಾರೆ. 42 ಮಂದಿ ಸೋಂಕಿತರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.
============================
ಕೋವಿಡ್ ಅಂಕಿ ಅಂಶ :
ಇಂದಿನ ಪ್ರಕರಣಗಳು: 08
ಇಂದು ಗುಣಮುಖ: 05
ಒಟ್ಟು ಗುಣಮುಖ: 6658
ಇಂದಿನ ಸಾವು: 00
ಒಟ್ಟು ಸಾವು: 131
ಸಕ್ರಿಯ ಪ್ರಕರಣಗಳು: 42
ಒಟ್ಟು ಸೋಂಕಿತರು: 6836