ಚಾಮರಾಜನಗರ: ಜಿಲ್ಲೆಯಲ್ಲಿ ಮತ್ತೆ ನಾಲ್ವರು ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಕಾಲೇಜುಗಳು ಆರಂ‘ವಾದ ಬಳಿಕ ಜಿಲ್ಲೆಯಲ್ಲಿ 9 ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿದೆ.
ಇಂದು ಜಿಲ್ಲೆಯಲ್ಲಿ 13 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇವರಲ್ಲಿ 4 ಮಂದಿ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದ ವಿದ್ಯಾರ್ಥಿಗಳು.
ಇದೇ ವೇಳೆ ಜಿಲ್ಲೆಯಲ್ಲಿ 6 ಸೋಂಕಿತರು ಗುಣಮುಖರಾಗಿದ್ಧಾರೆ. ಚಾಮರಾಜನಗರ ತಾಲೂಕು ಸಂತೆಮರಹಳ್ಳಿಯ 93 ವರ್ಷದ ವೃದ್ಧರು ಮೃತಪಟ್ಟಿದ್ದಾರೆ. ಇವರಿಗೆ ಮರಣಾನಂತರ ಕೋವಿಡ್ ಇರುವುದು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತ ಮೃತರ ಸಂಖ್ಯೆ 128ಕ್ಕೇರಿದೆ.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 6258 ಮಂದಿಗೆ ಸೋಂಕು ದೃಢಪಟ್ಟಿದೆ. ಇವರಲ್ಲಿ 6036 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 94 ಸಕ್ರಿಯ ಪ್ರಕರಣಗಳಿವೆ. ಇಂದು 1344 ಮಾದರಿಗಳನ್ನು ಪರೀಕ್ಷಿಸಲಾಗಿತ್ತು.
ಇದನ್ನೂ ಓದಿ :ಕೋರ್ಟ್‌ನಲ್ಲಿ ಟ್ರಂಪ್‌ಗೆ ಮುಖಭಂಗ! ಪೆನ್ಸಿಲ್ವೇನಿಯಾ ಮರು ಎಣಿಕೆಗೆ ಆಗ್ರಹಿಸಿದ್ದ ಅರ್ಜಿ ವಜಾ
ಇಂದಿನ ಪ್ರಕರಣಗಳು: 13
ಇಂದು ಗುಣಮುಖ: 06
ಒಟ್ಟು ಗುಣಮುಖ: 6036
ಇಂದಿನ ಸಾವು: 01
ಒಟ್ಟು ಸಾವು: 128
ಸಕ್ರಿಯ ಪ್ರಕರಣಗಳು: 94
ಒಟ್ಟು ಸೋಂಕಿತರು: 6258