Advertisement

ಚಾಮರಾಜನಗರ ಜಿಲ್ಲೆಯಲ್ಲಿ 13 ಹೊಸ ಕೋವಿಡ್ ಪ್ರಕರಣ ಪತ್ತೆ : 3 ಮಂದಿ ಗುಣಮುಖ

07:26 PM Nov 10, 2020 | sudhir |

ಚಾಮರಾಜನಗರ: ಜಿಲ್ಲೆಯಲ್ಲಿ ಮಂಗಳವಾರ 13 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 3 ಮಂದಿ ಗುಣಮುಖರಾಗಿದ್ದಾರೆ. 148 ಪ್ರಕರಣಗಳು ಸಕ್ರಿಯವಾಗಿವೆ.

Advertisement

ಇದುವರೆಗೆ ಜಿಲ್ಲೆಯಲ್ಲಿ 6,141 ಪ್ರಕರಣಗಳು ಒಟ್ಟಾರೆ ದೃಢಪಟ್ಟಿವೆ. ಈ ಪೈಕಿ 5,867 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 126 ಸೋಂಕಿತರು ಮೃತಪಟ್ಟಿದ್ದಾರೆ. ಮಂಗಳವಾರ ದೃಢಪಟ್ಟ 13 ಪ್ರಕರಣಗಳ ಪೈಕಿ ಚಾ.ನಗರ , ಗುಂಡ್ಲುಪೇಟೆ ತಾಲೂಕಿನಲ್ಲಿ ತಲಾ 5, ಕೊಳ್ಳೇಗಾಲ ತಾಲೂಕಿನಲ್ಲಿ 2, ಹನೂರು ತಾಲೂಕಿನಲ್ಲಿ 1 ಪ್ರಕರಣ ದಾಖಲಾಗಿದೆ.

ಇಂದಿನ ಪ್ರಕರಣಗಳು: 13
ಇಂದು ಗುಣಮುಖ: 03
ಒಟ್ಟು ಗುಣಮುಖ: 5867
ಇಂದಿನ ಸಾವು: 00
ಒಟ್ಟು ಸಾವು: 126
ಸಕ್ರಿಯ ಪ್ರಕರಣಗಳು: 148
ಒಟ್ಟು ಸೋಂಕಿತರು: 6141

Advertisement

Udayavani is now on Telegram. Click here to join our channel and stay updated with the latest news.

Next