ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ 44 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 43 ಮಂದಿ ಗುಣಮುಖರಾಗಿದ್ದಾರೆ. ಓರ್ವ ಸೋಂಕಿತರು ಮೃತಪಟ್ಟಿದ್ದಾರೆ.
ಚಾಮರಾಜನಗರ ತಾಲೂಕಿನ ಕಾಡಹಳ್ಳಿ ಗ್ರಾಮದ 41 ವರ್ಷದ ಮಹಿಳೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು ಸೆ. 25ರಂದು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಒಟ್ಟು 3825 ಪ್ರಕರಣಗಳು ಇದುವರೆಗೆ ದೃಢಪಟ್ಟಿವೆ. ಇದರಲ್ಲಿ 3105 ಮಂದಿ ಗುಣಮುಖರಾಗಿದ್ದಾರೆ. 633 ಸಕ್ರಿಯ ಪ್ರಕರಣಗಳಿವೆ. 87 ಮಂದಿ ಮೃತಪಟ್ಟಿದ್ದಾರೆ. 45 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 313 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.
ಭಾನುವಾರ 655 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಇದರಲ್ಲಿ 618ರ ಫಲಿತಾಂಶ ನೆಗೆಟಿವ್ ಆಗಿದೆ.
ಇಂದಿನ ಪ್ರಕರಣಗಳು: 44
ಇಂದು ಗುಣಮುಖ: 43
ಒಟ್ಟು ಗುಣಮುಖ: 3105
ಇಂದಿನ ಸಾವು: 01
ಒಟ್ಟು ಸಾವು: 87
ಸಕ್ರಿಯ ಪ್ರಕರಣಗಳು: 633
ಒಟ್ಟು ಸೋಂಕಿತರು: 3835