Advertisement
ಚಾಮರಾಜನಗರ ತಾಲೂಕಿನ ಕಾಡಹಳ್ಳಿ ಗ್ರಾಮದ 75 ವರ್ಷದ ವೃದ್ಧರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು ಸೆ. 5ರಂದು ಸೋಂಕಿನಿಂದಾಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸೆ. 23ರಂದು ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲೆಯ ಗರ್ಗೇಶ್ವರಿ ಗ್ರಾಮದ 57 ವರ್ಷದ ಮಹಿಳೆ ಸೆ. 17ರಂದು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಸೆ. 23ರಂದು ಮೃತಪಟ್ಟಿದ್ದಾರೆ. ಚಾಮರಾಜನಗರ ತಾಲೂಕಿನ ನಡುಕಲಮೋಳೆ ಗ್ರಾಮದ 58 ವರ್ಷದ ವ್ಯಕ್ತಿ ಸೆ. 7ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಸೆ. 23ರಂದು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಇಂದು ಗುಣಮುಖ – 25
ಒಟ್ಟು ಗುಣಮುಖ – 2978
ಇಂದಿನ ಸಾವು – 03
ಒಟ್ಟು ಸಾವು – 85
ಸಕ್ರಿಯ ಪ್ರಕರಣಗಳು – 633
ಒಟ್ಟು ಸೋಂಕಿತರು – 3696