Advertisement
ಜಿಲ್ಲೆಯ ಯಳಂದೂರು ತಾಲೂಕಿನ 60 ವರ್ಷದ ಮಹಿಳೆ ಆ. 17ರಂದು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ನಗರದ 55 ವರ್ಷದ ವ್ಯಕ್ತಿ ಆ. 12ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ನಿಧನರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಮಾಹಿತಿ ತಿಳಿಸಿದೆ.
ಚಾಮರಾಜನಗರ ತಾಲೂಕಿನಿಂದ 22, ಕೊಳ್ಳೇಗಾಲ ತಾಲೂಕಿನಿಂದ 8, ಯಳಂದೂರು, ಗುಂಡ್ಲುಪೇಟೆಯಿಂದ ತಲಾ 4, ಹನೂರು ತಾಲೂಕಿನಿಂದ 2 ಪ್ರಕರಣಗಳು ವರದಿಯಾಗಿವೆ. ಒಟ್ಟು 2109 ಜನರಿಗೆ ಸೋಂಕು ತಗುಲಿತ್ತು. ಇವರಲ್ಲಿ 1628 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 41 ಮಂದಿ ಮೃತಪಟ್ಟಿದ್ದಾರೆ. 17 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 199 ಮಂದಿ ಮನೆಗಳಲ್ಲಿ ಪ್ರತ್ಯೇಕವಾಗಿದ್ದಾರೆ.
Related Articles
ಇಂದು ಗುಣಮುಖ- 66
ಒಟ್ಟು ಗುಣಮುಖ- 1628
ಇಂದಿನ ಸಾವು- 02
ಒಟ್ಟು ಸಾವು- 41
ಸಕ್ರಿಯ ಪ್ರಕರಣಗಳು- 440
ಒಟ್ಟು ಸೋಂಕಿತರು- 2109
Advertisement