Advertisement

ಚಾಮರಾಜನಗರ: ಇಂದು 787 ಮಾದರಿಗಳ ಪರೀಕ್ಷೆಯಲ್ಲಿ ಕೇವಲ 20 ದೃಢ!

06:45 PM Jul 25, 2020 | sudhir |

ಚಾಮರಾಜನಗರ: ಜಿಲ್ಲೆಯಲ್ಲಿ ಇಂದು 19 ಮಂದಿ ಕೋವಿಡ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ವೇಳೆ ಜಿಲ್ಲೆಯಲ್ಲಿ ಇಂದು 20 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 198 ಸಕ್ರಿಯ ಪ್ರಕರಣಗಳಿವೆ.
ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 475 ಪ್ರಕರಣಗಳು ದೃಢಪಟ್ಟಿವೆ. ಇವರಲ್ಲಿ 271 ಮಂದಿ ಗುಣಮುಖರಾಗಿದ್ದಾರೆ.

Advertisement

ಕೊಳ್ಳೇಗಾಲ ತಾಲೂಕಿನಲ್ಲಿ 8, ಚಾಮರಾಜನಗರ ತಾಲೂಕಿನಲ್ಲಿ 6, ಗುಂಡ್ಲುಪೇಟೆ ತಾಲೂಕಿನಲ್ಲಿ 5 ಹಾಗೂ ಹನೂರಿನಲ್ಲಿ 1 ಪ್ರಕರಣಗಳು ದೃಢಪಟ್ಟಿವೆ. ಯಳಂದೂರು ತಾಲೂಕಿನಲ್ಲಿ ಇಂದು ಯಾವುದೇ ಪ್ರಕರಣ ಇಲ್ಲ.

ಒಟ್ಟು 787 ಮಾದರಿಗಳ ಪರೀಕ್ಷೆಯಲ್ಲಿ ಕೇವಲ 20 ಪ್ರಕರಣಗಳು ದೃಢಪಟ್ಟಿರುವುದು ಕೊಂಚ ಸಮಾಧಾನಕರ ವಿಷಯವಾಗಿದೆ.

ಕೊಳ್ಳೇಗಾಲ ತಾಲೂಕು: 45 ವರ್ಷದ ಮಹಿಳೆ, 19ನೇ ವಾರ್ಡ್, ಕೊಳ್ಳೇಗಾಲ. 40 ವರ್ಷದ ಪುರುಷ ಮುಳ್ಳೂರು, 35 ವರ್ಷದ ಯುವಕ ಕಾಮಗೆರೆ, 23 ವರ್ಷದ ಯುವತಿ, ಸತ್ತೇಗಾಲ, 25 ವರ್ಷದ ಯುವಕ ಹರಳೆ, 33 ವರ್ಷದ ಯುವಕ ಭೀಮನಗರ ಕೊಳ್ಳೇಗಾಲ, 43 ವರ್ಷದ ಪುರುಷ, 14 ವರ್ಷದ ಬಾಲಕಿ, ದೊಡ್ಡನಾಯಕರ ಬೀದಿ, ಕೊಳ್ಳೇಗಾಲ.

ಚಾಮರಾಜನಗರ ತಾಲೂಕು: 21 ವರ್ಷದ ಯುವತಿ, ನೂರ್ ಮಸೀದಿ ಪಕ್ಕ, ಚಾ.ನಗರ. 14 ವರ್ಷದ ಬಾಲಕಿ ವೀರನಪುರ. 56 ವರ್ಷದ ಮಹಿಳೆ, ಚಾಮರಾಜನಗರ. 47 ವರ್ಷದ ಪುರುಷ, ಹಳೆ ಆರ್‌ಟಿಓ ಕಚೇರಿ ಹಿಂಭಾಗ, ಚಾ.ನಗರ. 32 ವರ್ಷದ ಯುವಕ 14ನೇ ವಾರ್ಡ್, ಚಾ.ನಗರ. 53 ವರ್ಷದ ಮಹಿಳೆ, ಮಾದಾಪುರ.

Advertisement

ಗುಂಡ್ಲುಪೇಟೆ ತಾಲೂಕು: 48 ವರ್ಷದ ಮಹಿಳೆ, ತೆರಕಣಾಂಬಿ, 22 ವರ್ಷದ ಯುವಕ, ವೀರನಪುರ ಕಾಲೋನಿ, ಗುಂಡ್ಲುಪೇಟೆ. 27 ವರ್ಷದ ಯುವಕ, 65 ವರ್ಷದ ವೃದ್ಧೆ, ಪಂಜನಹಳ್ಳಿ, 48 ವರ್ಷದ ಮಹಿಳೆ, ನಿಟ್ರೆ.

ಹನೂರು: 27 ವರ್ಷದ ಯುವಕ ವಾಸವಿ ದೇವಸ್ಥಾನದ ರಸ್ತೆ. ಹನೂರು.

Advertisement

Udayavani is now on Telegram. Click here to join our channel and stay updated with the latest news.

Next