ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ 59 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 25 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 503 ಸಕ್ರಿಯ ಪ್ರಕರಣಗಳಿವೆ.
ಚಾಮರಾಜನಗರ ತಾಲೂಕಿನಿಂದ 34, ಗುಂಡ್ಲುಪೇಟೆ ತಾಲೂಕಿನಿಂದ 16, ಕೊಳ್ಳೇಗಾಲ ತಾಲೂಕಿನಿಂದ 6, ಯಳಂದೂರು ತಾಲೂಕಿನಿಂದ 3 ಪ್ರಕರಣಗಳು ಇಂದು ವರದಿಯಾಗಿವೆ.
ಜಿಲ್ಲೆಯಲ್ಲಿ ಒಟ್ಟು 1,964 ಮಂದಿಗೆ ಕೋವಿಡ್ ಸೋಂಕು ತಗುಲಿದ್ದು, ಇವರಲ್ಲಿ 1,428 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 33 ಮಂದಿ ಸೋಂಕಿತರು ಮೃತಪಟ್ಟಿದ್ದು, ಪ್ರಸ್ತುತ ಕೋವಿಡ್ ಆಸ್ಪತ್ರೆಯಲ್ಲಿ 36 ಮಂದಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 165 ಮಂದಿ ಹೋಂ ಐಸೋಲೇಷನ್‌ಗೊಳಪಟ್ಟಿದ್ದಾರೆ.
ಇಂದಿನ ಪ್ರಕರಣಗಳು-59
ಇಂದು ಗುಣಮುಖ-25
ಒಟ್ಟು ಗುಣಮುಖ-1428
ಇಂದಿನ ಸಾವು-0
ಒಟ್ಟು ಸಾವು-33
ಸಕ್ರಿಯ ಪ್ರಕರಣಗಳು-503
ಒಟ್ಟು ಸೋಂಕಿತರು-1964