ಚಾಮರಾಜನಗರ: ಜಿಲ್ಲೆಯಲ್ಲಿ ಇಂದು ಕೋವಿಡ್‌ನಿಂದ ಓರ್ವ ವೃದ್ಧ ಮೃತಪಟ್ಟಿದ್ದಾರೆ. ಈ ಪ್ರಕರಣವೂ ಸೇರಿ ಜಿಲ್ಲೆಯಲ್ಲಿ ಒಟ್ಟು 5 ಮಂದಿ ಕೋವಿಡ್ ಸೋಂಕಿನಿಂದ ಸಾವಿಗೀಡಾಗಿದ್ದಾರೆ.
ಇದೇ ವೇಳೆ, ಮೃತ ವೃದ್ಧರ ಅಂತ್ಯಕ್ರಿಯೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್ ಅವರು ಭಾಗವಹಿಸಿ, ಅಂತ್ಯಕ್ರಿಯೆಗೆ ಸಹಕರಿಸಿದರು.
ಕೊಳ್ಳೇಗಾಲ ತಾಲೂಕಿನ ಬಸ್ತಿಪುರ ಗ್ರಾಮದ 65 ವರ್ಷದ ವೃದ್ಧ ಮೃತಪಟ್ಟವರು. ತೀವ್ರತರದ ಡಯಾಬಿಟೀಸ್ ಹಾಗೂ ಉಸಿರಾಟದ ತೊಂದರೆಯಿಂದ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಪರೀಕ್ಷೆ ನಡೆಸಿದಾಗ ಕೋವಿಡ್ ದೃಢಪಟ್ಟು ಜು.19ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾಘಟಕದಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಜು.23: ರಾಜ್ಯದಲ್ಲಿ ನಿತ್ಯ ಪ್ರಕರಣಗಳ ಸಂಖ್ಯೆ 5 ಸಾವಿರಕ್ಕೇರಿಕೆ; 97 ಸಾವು, 2071 ಚೇತರಿಕೆ
ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಎಡೀಸಿ: ಇವರ ಅಂತ್ಯಕ್ರಿಯೆ ಕೋವಿಡ್ ಶಿಷ್ಟಾಚಾರದ ಅನುಸಾರ ಇಂದು ನಗರದ ಹೊರವಲಯದಲ್ಲಿ ನಡೆಯಿತು. ಪಿಎಫ್ ಐ ಕಾರ್ಯಕರ್ತರು ಅಂತ್ಯಕ್ರಿಯೆ ನಡೆಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಅವರೇ ಮುಂದೆ ನಿಂತು ಅಂತ್ಯಕ್ರಿಯೆ ಸುಗಮವಾಗಿ ನೆರವೇರಲು ಸಹಕರಿಸಿದರು.
ಶವಗಾರದಿಂದ ಹಿಡಿದು ಅಂತ್ಯಕ್ರಿಯೆ ನೆರವೇರಿದ ಸ್ಥಳದಲ್ಲಿಯೂ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಪಿ.ಪಿ.ಇ.ಕಿಟ್ ಧರಿಸಿ ಭಾಗವಹಿಸಿ ಎಲ್ಲ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಮಾದರಿಯಾದರು.