Advertisement

ಚಾಮರಾಜನಗರ: ಕೋವಿಡ್ ಸೋಂಕಿನಿಂದ 49 ಮಂದಿ ಗುಣಮುಖ! 39 ಹೊಸ ಪ್ರಕರಣ ಪತ್ತೆ

06:45 PM Aug 17, 2020 | sudhir |

ಚಾಮರಾಜನಗರ: ಜಿಲ್ಲೆಯಲ್ಲಿ ಸೋಮವಾರ ಕೋವಿಡ್‌ನಿಂದ 49 ಮಂದಿ ಗುಣಮುಖರಾಗಿದ್ದರೆ, 39 ಹೊಸ ಪ್ರಕರಣಗಳು ಪತ್ತೆಯಾಗಿವೆ. ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.

Advertisement

ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 1640 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 1196 ಮಂದಿ ಗುಣಮುಖರಾಗಿದ್ದಾರೆ. 413 ಸಕ್ರಿಯ ಪ್ರಕರಣಗಳಿವೆ. ಒಟ್ಟು 31 ಮಂದಿ ಮೃತಪಟ್ಟಿದ್ದಾರೆ. 17 ಮಂದಿ ಐಸಿಯುನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಳ್ಳೇಗಾಲದ ಭೀಮನಗರದ 60 ವರ್ಷದ ಪುರುಷ, ಅಸ್ತಮಾ ಮತ್ತು ಮಧುಮೇಹದಿಂದ ಬಳಲುತ್ತಿದ್ದರು. ಆ. 14ರಂದು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಅಂದು ಸಂಜೆ ಮೃತಪಟ್ಟಿದ್ದಾರೆ.

ಸೋಮವಾರ 15 ಮಂದಿ ಹೋಂ ಐಸೋಲೇಷನ್‌ಗೊಳಪಟ್ಟಿದ್ದಾರೆ. ಒಟ್ಟು 149 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.
ಸೋಮವಾರ 292 ಮಾದರಿಗಳನ್ನು ಪರೀಕ್ಷೆ ಮಾಡಲಾಯಿತು. 254 ನೆಗೆಟಿವ್ ಆಗಿವೆ.

Advertisement

Udayavani is now on Telegram. Click here to join our channel and stay updated with the latest news.

Next