Advertisement
ಹುಲಿಗಳ ನಾಡು ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮದವರಾದ ಡಾ.ಸಿ.ನಾಗಣ್ಣ ಅವರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಹುಟ್ಟೂರು ಚಿಕ್ಕಾಟಿ ಗ್ರಾಮದಲ್ಲಿ. ತಂದೆ ಕಾಳಪ್ಪ ತಾಯಿ ಚಿನ್ನಮ್ಮ. ಪ್ರೌಢಶಾಲೆ ಮತ್ತು ಪದವಿಪೂರ್ವ ಶಿಕ್ಷಣ ನಂಜನಗೂಡಿನ ಸರ್ಕಾರಿ ವಿವಿಧೋದ್ದೇಶ ಪ್ರೌಢಶಾಲೆಯಲ್ಲಿ. ಶಾರದಾ ವಿಲಾಸ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ. ಪದವಿ ಓದಿದ್ದು ವಿಜ್ಞಾನ ವಿಷಯದಲ್ಲಾದರೂ, ಸಾಹಿತ್ಯದಲ್ಲಿನ ಆಸಕ್ತಿಯಿಂದಾಗಿ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಂತರ ಮಾನಸ ಗಂಗೋತ್ರಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಪ್ರಸ್ತುತ ಸಂದರ್ಶಕ ಪ್ರಾಧ್ಯಾಪಕರಾಗಿ ಮುಂದುವರೆದಿದ್ದಾರೆ. ಒಟ್ಟು 42 ವರ್ಷಗಳ ಕಾಲ ಅಧ್ಯಾಪನ ವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದಾರೆ.
Related Articles
Advertisement
ರಾಜ್ಯೋತ್ಸವ ಪ್ರಶಸ್ತಿ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ ಅವರು,ಸ್ನೇಹಿತರು ಹಿತೈಷಿಗಳು ಮೊದಲೇ ಈ ಪ್ರಶಸ್ತಿ ಬರಬೇಕಿತ್ತು ಎನ್ನುತ್ತಿದ್ದಾರೆ. ಪ್ರಶಸ್ತಿ, ಗೌರವಗಳು ಯಾವಾಗ ಬರಬೇಕೋ ಆಗಲೇ ಬರೋದು. ಆ ಕ್ಷಣ ಕೂಡಿ ಬರಬೇಕು ಎಂಬುದು ನನ್ನ ಖಚಿತ ನಂಬಿಕೆ. ಸರ್ಕಾರ ಬೇರೆ ಬೇರೆ ಕ್ಷೇತ್ರದಲ್ಲಿರುವ ಪ್ರಗತಿ ಪರ ಆಲೋಚನೆಯುಳ್ಳವರನ್ನು ಗುರುತಿಸಿರುವುದು ಸಂತಸದ ಸಂಗತಿ. ಕರ್ನಾಟಕ ಎಂದು ನಾಮಕರಣವಾಗಿ, ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ನನಗೆ ಪ್ರಶಸ್ತಿ ಬಂದಿರುವುದು ಬಹಳ ಸಂತೋಷ ಅಭಿಮಾನ ಮೂಡಿಸಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.