Advertisement

ಚಾಮರಾಜನಗರ: ಸಕ್ರಿಯ ಪ್ರಕರಣಗಳ ಸಂಖ್ಯೆ ತೀವ್ರ ಇಳಿಮುಖ

09:10 PM Oct 23, 2020 | mahesh |

ಚಾಮರಾಜನಗರ: ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ಸಕ್ರಿಯ ಪ್ರಕರಣಗಳ ಸಂಖ್ಯೆ 700ನ್ನು ದಾಟಿತ್ತು. ಪ್ರಸ್ತುತ ಜಿಲ್ಲೆಯಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಕಾರಣ ಶುಕ್ರವಾರ ಸಕ್ರಿಯ ಪ್ರಕರಣಗಳ ಸಂಖ್ಯೆ 378 ಮಾತ್ರ ಇದೆ! ಅಲ್ಲದೇ ಕಳೆದ ಮೂರು ದಿನಗಳಿಂದ ಕೋವಿಡ್ ಸಾವಿನ ಪ್ರಕರಣಗಳು ವರದಿಯಾಗಿಲ್ಲದಿರುವುದೂ ಕೊಂಚ ಸಮಾಧಾನಕರ ಸಂಗತಿಯಾಗಿದೆ.

Advertisement

ಶುಕ್ರವಾರ 163 ಮಂದಿ ಗುಣಮುಖರಾಗಿದ್ದಾರೆ. ಇವರಲ್ಲಿ 113 ಮಂದಿ ಆಸ್ಪತ್ರೆಯಿಂದ, 50 ಮಂದಿ ಹೋಂ ಐಸೋಲೇಷನ್‌ನಿಂದ ಬಿಡುಗಡೆಯಾಗಿದ್ದಾರೆ. 1139 ಜನರ ಕೋವಿಡ್ ಟೆಸ್‌ಟ್ನಲ್ಲಿ 38 ಜನರಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ಈವರೆಗೆ 5725 ಜನರಿಗೆ ಸೋಂಕು ತಗುಲಿದ್ದು, ಇವರಲ್ಲಿ 5229 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ನಿಂದ 99 ಮಂದಿ ಹಾಗೂ ಕೋವಿಡ್ ಅಲ್ಲದ ಕಾರಣದಿಂದ 19 ಮಂದಿ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 86,447 ಮಾದರಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 80,839 ಮಾದರಿಗಳ ಪರೀಕ್ಷೆ ನೆಗೆಟಿವ್ ಬಂದಿದೆ. ಶುಕ್ರವಾರದ ಒಟ್ಟು 38 ದೃಢೀಕೃತ ಪ್ರಕರಣಗಳಲ್ಲಿ ಚಾ.ನಗರ ತಾಲೂಕಿನಲ್ಲೇ ಅತಿಹೆಚ್ಚು 20 ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ಗುಂಡ್ಲುಪೇಟೆಯಲ್ಲಿ 7, ಕೊಳ್ಳೇಗಾಲದಲ್ಲಿ 3, ಹನೂರಿನಲ್ಲಿ 3, ಯಳಂದೂರಿನಲ್ಲಿ 4 ಪ್ರಕರಣಗಳು ದೃಢಪಟ್ಟಿವೆ.

ಇಂದಿನ ಪ್ರಕರಣಗಳು: 38
ಇಂದು ಗುಣಮುಖ: 163
ಒಟ್ಟು ಗುಣಮುಖ: 5229
ಇಂದಿನ ಸಾವು: 00
ಒಟ್ಟು ಸಾವು: 119
ಸಕ್ರಿಯ ಪ್ರಕರಣಗಳು: 378
aಒಟ್ಟು ಸೋಂಕಿತರು: 5687

Advertisement

Udayavani is now on Telegram. Click here to join our channel and stay updated with the latest news.

Next