ಚಾಮರಾಜನಗರ: ಜಿಲ್ಲೆಯಲ್ಲಿ ಶನಿವಾರ 72 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 28 ಮಂದಿ ಹೋಂ ಐಸೋಲೇಷನ್‌ನಿಂದ ಬಿಡುಗಡೆಯಾಗಿದ್ದಾರೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಒಟ್ಟು ಸೋಂಕಿತರ ಸಂಖ್ಯೆ 3418 ಏರಿಕೆಯಾಗಿದೆ. 2717 ಮಂದಿ ಗುಣಮುಖರಾಗಿದ್ದಾರೆ. 627 ಸಕ್ರಿಯ ಪ್ರಕರಣಗಳಿವೆ. ಒಟ್ಟು 75 ಮಂದಿ ಸೋಂಕಿತರು ಮೃತ ಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಶನಿವಾರ 716 ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಇದರಲ್ಲಿ 646 ರ ಫಲಿತಾಂಶ ನೆಗೆಟಿವ್ ಬಂದಿದೆ.
ಕೊಳ್ಳೇಗಾಲ ತಾಲೂಕು ಕಾಮಗೆರೆಯ 63 ವರ್ಷದ ವೃದ್ಧರು ಸೆ. 17ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಸೆ. 18ರಂದು ಮೃತರಾಗಿದ್ದಾರೆ. ಚಾಮರಾಜನಗರ ತಾಲೂಕಿನ ಮಾದಾಪುರ ಗ್ರಾಮದ 72 ವರ್ಷದ ವೃದ್ಧರು ಸೆ. 17ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಸೆ. 18ರಂದು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಇಂದಿನ ಪ್ರಕರಣಗಳು-72
ಇಂದು ಗುಣಮುಖ-28
ಒಟ್ಟು ಗುಣಮುಖ-2717
ಇಂದಿನ ಸಾವು-02
ಒಟ್ಟು ಸಾವು-75
ಸಕ್ರಿಯ ಪ್ರಕರಣಗಳು-627
ಒಟ್ಟು ಸೋಂಕಿತರು-3418