ಚಾಮರಾಜನಗರ: ಜಿಲ್ಲೆಯಲ್ಲಿ ಮಂಗಳವಾರ 69 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 69 ಮಂದಿ ಗುಣಮುಖರಾಗಿದ್ದಾರೆ. ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಹನೂರು ಪಟ್ಟಣದ 64 ವರ್ಷದ ಪುರುಷ, ಚಾ.ನಗರದ ನಿವಾಸಿ 54 ವರ್ಷದ ಪುರುಷ ಹಾಗೂ ಗುಂಡ್ಲುಪೇಟೆ ತಾಲೂಕು ಬಾಚಹಳ್ಳಿ ಗ್ರಾಮದ ನಿವಾಸಿ 35 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 5060 ಪ್ರಕರಣಗಳು ದೃಢಪಟ್ಟಿದ್ದು, ಇವರಲ್ಲಿ 4213 ಮಂದಿ ಗುಣಮುಖರಾಗಿದ್ದಾರೆ. 739 ಸಕ್ರಿಯ ಪ್ರಕರಣಗಳಿವೆ. ಮಂಗಳವಾರ ಒಟ್ಟು 1221 ಮಾದರಿಗಳನ್ನು ಪರೀಕ್ಷಗೆ ಒಳಪಡಿಸಲಾಗಿತ್ತು. 1158 ಮಾದರಿಗಳ ವರದಿ ನೆಗೆಟಿವ್ ಆಗಿದೆ. ಇದುವರೆಗೆ 108 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 42 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 206 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ.
ಇಂದಿನ ಪ್ರಕರಣಗಳು: 69
ಇಂದು ಗುಣಮುಖ: 69
ಒಟ್ಟು ಗುಣಮುಖ: 4213
ಇಂದಿನ ಸಾವು: 03
ಒಟ್ಟು ಸಾವು: 108
ಸಕ್ರಿಯ ಪ್ರಕರಣಗಳು: 739
ಒಟ್ಟು ಸೋಂಕಿತರು: 5060