ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ 1435 ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು ಒಟ್ಟು 57 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 105 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 702 ಪ್ರಕರಣಗಳು ಸಕ್ರಿಯವಾಗಿವೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 4787 ದೃಢೀಕೃತ ಪ್ರಕರಣಗಳು ವರದಿಯಾಗಿದ್ದು, ಇವರಲ್ಲಿ 3984 ಮಂದಿ ಗುಣಮುಖರಾಗಿದ್ದಾರೆ. 101 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಶುಕ್ರವಾರ ದೃಢಪಟ್ಟ ಒಟ್ಟು 57 ಪ್ರಕರಣಗಳಲ್ಲಿ ಚಾಮರಾಜನಗರ ತಾಲೂಕಿನ 15, ಗುಂಡ್ಲುಪೇಟೆ ತಾಲೂಕಿನ 14, ಕೊಳ್ಳೇಗಾಲದಲ್ಲಿ 12, ಯಳಂದೂರು 4, ಹನೂರು ತಾಲೂಕಿನ 11, ಇತರ ಜಿಲ್ಲೆಯ 1 ಪ್ರಕರಣಗಳಿವೆ.
ಇಂದಿನ ಪ್ರಕರಣಗಳು: 57
ಇಂದು ಗುಣಮುಖ: 105
ಒಟ್ಟು ಗುಣಮುಖ: 3984
ಇಂದಿನ ಸಾವು: 00
ಒಟ್ಟು ಸಾವು: 101
ಸಕ್ರಿಯ ಪ್ರಕರಣಗಳು: 702
ಒಟ್ಟು ಸೋಂಕಿತರು: 4787