Advertisement

ಮಾರುವೇಷದಲ್ಲಿ ಅಭಿಮಾನಿಗಳ ಮಧ್ಯೆ ಚಿತ್ರ ವೀಕ್ಷಿಸಿದ ದರ್ಶನ್‌!

12:18 PM Mar 16, 2021 | Team Udayavani |

“ರಾಬರ್ಟ್‌’ ಚಿತ್ರ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವಂತೆಯೇ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಥಿಯೇಟರ್‌ಗಳ ಭೇಟಿಗೆ ಮುಂದಾಗಿದ್ದಾರೆ.

Advertisement

ವಾರಾಂತ್ಯದಲ್ಲಿ ಕೆಲ ಥಿಯೇಟರ್‌ಗಳಿಗೆ ಭೇಟಿ ನೀಡಿದ ದರ್ಶನ್‌, ಮಾರುವೇಷದಲ್ಲಿ ಅಭಿಮಾನಿಗಳ ನಡುವೆಯೇ ಕುಳಿತು ಚಿತ್ರವನ್ನು ವೀಕ್ಷಿಸಿದ್ದಾರೆ.

ಇದನ್ನೂ ಓದಿ: 4ನೇ ದಿನವೂ ಬಾಕ್ಸಾಫೀಸ್‌ನಲ್ಲಿ ನಾಗಾಲೋಟ: ಹೊಸ ದಾಖಲೆ ಬರೆದ ‘ರಾಬರ್ಟ್’

ಅಭಿಮಾನಿಗಳ ಜೊತೆ ಸಿನಿಮಾ ನೋಡಿ ಶಿಳ್ಳೆ, ಚಪ್ಪಾಳೆಗಳನ್ನು ಕೇಳಿಕೊಂಡು ಖುಷಿಯಾಗಿರುವ ದರ್ಶನ್‌, ಮುಂದಿನ ಸಿನಿಮಾದಲ್ಲಿ ಶಿಳ್ಳೆ, ಚಪ್ಪಾಳೆ ಹೆಚ್ಚಾಗಿ ಬರುವ ದೃಶ್ಯಗಳ ಕಡೆ ಗಮನ ಹರಿಸುವುದಾಗಿ ಹೇಳಿದ್ದಾರೆ.

ಬಿಡುಗಡೆಗೂ ಮೊದಲೇ ದಾಖಲೆಯ ಪ್ರದರ್ಶನ ಕಾಣುವ ಮೂಲಕ ಸದ್ದು ಮಾಡಿದ್ದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ರಾಬರ್ಟ್‌’ ಚಿತ್ರ, ಬಿಡುಗಡೆಯ ನಂತರ ಗಳಿಕೆಯ ಮೂಲಕ ಸದ್ದು ಮಾಡುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಮೊದಲ ದಿನವೇ ಒಟ್ಟು 20 ಕೋಟಿಗೂ ಅಧಿಕ ಹಣ ಗಳಿಕೆ ಮಾಡಿದ್ದ “ರಾಬರ್ಟ್‌’, ಸದ್ಯ ಬಿಡುಗಡೆಯಾದ ನಾಲ್ಕನೇ ದಿನಕ್ಕೆ 50 ಕೋಟಿ ಗಳಿಕೆ ಮಾಡುವ ಮೂಲಕ 50 ಕೋಟಿ ಕ್ಲಬ್‌ ಸೇರ್ಪಡೆಯಾಗಿದೆ.

Advertisement

ಇದನ್ನೂ ಓದಿ:ಶಾನ್ವಿ ಕಣ್ಣಲ್ಲಿ ‘ಕಸ್ತೂರಿ ಮಹಲ್‌’ ಕನಸು: 19 ರಂದು ಲಿರಿಕಲ್‌ ವಿಡಿಯೋ ರಿಲೀಸ್‌

Advertisement

Udayavani is now on Telegram. Click here to join our channel and stay updated with the latest news.

Next