Advertisement

ದರ್ಶನ್ ಗಿಂದು ಹುಟ್ಟುಹಬ್ಬದ ಸಂಭ್ರಮ; ಬಯಲಾಯ್ತು ಹೊಸ ಸಿನಿಮಾ ಟೈಟಲ್

08:23 AM Feb 16, 2023 | Team Udayavani |

ನಟ ದರ್ಶನ್‌ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈಗಾಗಲೇ ಅವರ ಅಭಿಮಾನಿಗಳ ಸಂಭ್ರಮ ಆರಂಭವಾಗಿದೆ. ಈಗ ಈ ಖುಷಿಯನ್ನು ಹೆಚ್ಚಿಸಲು ದರ್ಶನ್‌ ಅವರ ಹೊಸ ಸಿನಿಮಾದ ಟೈಟಲ್‌ ಕೂಡಾ ಬಿಡುಗಡೆ ಮಾಡಲಾಗಿದೆ.

Advertisement

ಹೌದು, ನಟ ದರ್ಶನ್‌ ಅವರ 56ನೇ ಚಿತ್ರದ ಶೀರ್ಷಿಕೆ ಏನು ಎಂಬ ಕುತೂಹಲ ಅನೇಕರಿಗಿತ್ತು. ಈಗ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಚಿತ್ರಕ್ಕೆ “ಕಾಟೇರ’ ಎಂದು ಟೈಟಲ್‌ ಇಡಲಾಗಿದೆ.

ತರುಣ್‌ ಸುಧೀರ್‌ ನಿರ್ದೇಶನದ ಈ ಚಿತ್ರವನ್ನು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸುತ್ತಿದ್ದಾರೆ. ಈಗಾಗಲೇ ತರುಣ್‌ ಹಾಗೂ ದರ್ಶನ್‌ ಕಾಂಬಿನೇಶನ್‌ನಲ್ಲಿ ಬಂದಿರುವ “ರಾಬರ್ಟ್‌’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿತ್ತು. ಈಗ ಅವರಿಬ್ಬರ ಕಾಂಬಿನೇಶನ್‌ನ “ಕಾಟೇರ’ ಮೇಲೆ ನಿರೀಕ್ಷೆ ಇದೆ.

ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ನಲ್ಲಿ ದರ್ಶನ್‌ ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಮಚ್ಚು ಹಿಡಿದು ಪಕ್ಕಾ ರಗಡ್‌ ಲುಕ್‌ನಲ್ಲಿ ಅಭಿಮಾನಿಗಳ ಮುಂದೆ ಬರಲು ತಯಾರಾಗಿದ್ದಾರೆ. ಪೋಸ್ಟರ್‌ ನ ಬ್ಯಾಕ್‌ ಡ್ರಾಪ್‌ ನಲ್ಲಿ ನೇಗಿಲು ಹೊತ್ತ ರೈತರ ಗುಂಪು, ಸಂಸತ್‌ ಭವನ… ಹೀಗೆ ಹಲವು ವಿಚಾರಗಳನ್ನು ಸೂಕ್ಷ್ಮವಾಗಿ ಹೇಳಲಾಗಿದೆ.

ಇದಲ್ಲದೇ “ಮಿಲನಾ’ ಪ್ರಕಾಶ್‌ ನಿರ್ದೇಶನದ ಹೊಸ ಸಿನಿಮಾದಲ್ಲೂ ದರ್ಶನ್‌ ನಟಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next