Advertisement

ನ್ಯೂಜಿಲ್ಯಾಂಡಿಗೆ 245 ರನ್‌ ಸವಾಲು

12:12 AM Jun 06, 2019 | Sriram |

ಲಂಡನ್‌: “ಕೆನ್ನಿಂಗ್ಟನ್‌ ಓವಲ್‌’ನಲ್ಲಿ ನಡೆಯುತ್ತಿರುವ ಬುಧವಾರದ ದ್ವಿತೀಯ ವಿಶ್ವಕಪ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಬಾಂಗ್ಲಾದೇಶ 49.2 ಓವರ್‌ಗಳಲ್ಲಿ 244 ರನ್‌ ಪೇರಿಸಿದೆ. ಈ ತಂಡಗಳೆರಡೂ ಕೂಟದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದ್ದವು.

Advertisement

ತಮಿಮ್‌ ಇಕ್ಬಾಲ್‌-ಸೌಮ್ಯ ಸರ್ಕಾರ್‌ ಮೊದಲ ವಿಕೆಟಿಗೆ 8.3 ಓವರ್‌ಗಳಿಂದ 45 ರನ್‌ ಒಟ್ಟುಗೂಡಿಸಿದ ಬಳಿಕ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ತಂಡದ ಮೊತ್ತವನ್ನು ಬೆಳೆಸುತ್ತ ಹೋದರು. ವನ್‌ಡೌನ್‌ನಲ್ಲಿ ಬಂದು ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ ಶಕಿಬ್‌ ಬಾಂಗ್ಲಾ ಸರದಿಯ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು. 68 ಎಸೆತ ಎದುರಿಸಿದ ಅವರು 7 ಬೌಂಡರಿ ನೆರವಿನಿಂದ 64 ರನ್‌ ಹೊಡೆದರು.
ಕೊನೆಯಲ್ಲಿ ಮೊಹಮ್ಮದ್‌ ಮಿಥುನ್‌, ಮಹಮದುಲ್ಲ ಮತ್ತು ಮೊಹಮ್ಮದ್‌ ಸೈಫ‌ುದ್ದೀನ್‌ ಉತ್ತಮ ಪ್ರದರ್ಶನ ನೀಡಿದರು. ಮೂವರಿಂದ ಒಟ್ಟು 75 ರನ್‌ ಸಂದಾಯವಾಯಿತು.

47ಕ್ಕೆ 4 ವಿಕೆಟ್‌ ಉರುಳಿಸಿದ ಪರ ಮ್ಯಾಟ್‌ ಹೆನ್ರಿ ನ್ಯೂಜಿಲ್ಯಾಂಡಿನ ಯಶಸ್ವಿ ಬೌಲರ್‌. ಟ್ರೆಂಟ್‌ ಬೌಲ್ಟ್ 2 ವಿಕೆಟ್‌ ಉರುಳಿಸಿದರು.

ಸ್ಕೋರ್‌ ಪಟ್ಟಿ
ಬಾಂಗ್ಲಾದೇಶ
ತಮಿಮ್‌ ಇಕ್ಬಾಲ್‌ ಸಿ ಬೌಲ್ಟ್ ಬಿ ಫ‌ರ್ಗ್ಯುಸನ್‌ 24
ಸೌಮ್ಯ ಸರ್ಕಾರ್‌ ಬಿ ಹೆನ್ರಿ 25
ಶಕಿಬ್‌ ಅಲ್‌ ಹಸನ್‌ ಸಿ ಲ್ಯಾಥಂ ಬಿ ಗ್ರ್ಯಾಂಡ್‌ಹೋಮ್‌ 64
ಮುಶ್ಫಿಕರ್‌ ರಹೀಂ ರನೌಟ್‌ 19
ಮೊಹಮ್ಮದ್‌ ಮಿಥುನ್‌ ಸಿ ಗ್ರ್ಯಾಂಡ್‌ಹೋಮ್‌ ಬಿ ಹೆನ್ರಿ 26
ಮಹಮದುಲ್ಲ ಸಿ ವಿಲಿಯಮ್ಸನ್‌ ಬಿ ಸ್ಯಾಂಟ್ನರ್‌ 20
ಮೊಸದ್ದೆಕ್‌ ಹೊಸೈನ್‌ ಸಿ ಗಪ್ಟಿಲ್‌ ಬಿ ಬೌಲ್ಟ್ 11
ಮೊಹಮ್ಮದ್‌ ಸೈಫ‌ುದ್ದೀನ್‌ ಬಿ ಹೆನ್ರಿ 29
ಮೆಹಿದಿ ಹಸನ್‌ ಸಿ ಲ್ಯಾಥಂ ಬಿ ಬೌಲ್ಟ್ 7
ಮಶ್ರಫೆ ಮೊರ್ತಜ ಸಿ ಬೌಲ್ಟ್ ಬಿ ಹೆನ್ರಿ 1
ಮುಸ್ತಫಿಜುರ್‌ ರಹಮಾನ್‌ ಔಟಾಗದೆ 0
ಇತರ 18
ಒಟ್ಟು (49.2 ಓವರ್‌ಗಳಲ್ಲಿ ಆಲೌಟ್‌) 244
ವಿಕೆಟ್‌ ಪತನ: 1-45, 2-60, 3-110, 4-151, 5-179, 6-197, 7-224, 8-235, 9-244.
ಬೌಲಿಂಗ್‌:
ಮ್ಯಾಟ್‌ ಹೆನ್ರಿ 9.2-0-47-4
ಟ್ರೆಂಟ್‌ ಬೌಲ್ಟ್ 10-0-44-2
ಲಾಕಿ ಫ‌ರ್ಗ್ಯುಸನ್‌ 10-0-40-1
ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 8-0-39-1
ಜೇಮ್ಸ್‌ ನೀಶಮ್‌ 2-0-24-0
ಮಿಚೆಲ್‌ ಸ್ಯಾಂಟ್ನರ್‌ 10-1-41-1

Advertisement

Udayavani is now on Telegram. Click here to join our channel and stay updated with the latest news.

Next