Advertisement

ಸಿದ್ಧ ಶೌಚಾಲಯ ಬಳಕೆ ಯಾವಾಗ?

12:12 PM Jun 15, 2019 | Team Udayavani |

ಚಳ್ಳಕೆರೆ: ಸರಕಾರ ಬಯಲು ಶೌಚ ಮುಕ್ತಕ್ಕೆ ಇತಿಶ್ರೀ ಹಾಡಲು ಸಾಕಷ್ಟು ಯತ್ನಿಸುತ್ತಿದೆ. ಇದಕ್ಕಾಗಿ ಕೋಟ್ಯಂತರ ರೂ. ಅನುದಾನ ವೆಚ್ಚ ಮಾಡಿ ಯೋಜನೆ ರೂಪಿಸಿದೆ. ಆದರೆ ನಗರದ ವಾರ್ಡ್‌ ಒಂದರಲ್ಲಿ ಮನೆ ಮುಂದೆ ಶೌಚಾಲಯವಿದ್ದರೂ ಜನ ಮಾತ್ರ ಅದನ್ನು ಬಳಸುವಂತಿಲ್ಲ.

Advertisement

ಹೌದು. ನಗರದ 29ನೇ ವಾರ್ಡ್‌ನಲ್ಲಿ ಹಲವಾರು ದಶಕಗಳಿಂದ ಸಾರ್ವಜನಿಕರು ಬಯಲು ಶೌಚವನ್ನೇ ನೆಚ್ಚಿದ್ದು, ಸಿದ್ಧಪಡಿಸಿದ ಶೌಚಾಲಯಗಳು ಮನೆ ಮುಂದೆ ಇದ್ದರೂ ಬಳಸುವಂತಿಲ್ಲ. ಇದರಿಂದ ರೋಗಗಳು ಹರಡುವ ಸಂಭವ ಹೆಚ್ಚಿದೆ. ಪ್ರತಿಯೊಂದು ಮನೆಯೂ ಶೌಚಾಲಯ ಹೊಂದಬೇಕೆಂಬ ಯೋಜನೆ ಕೇಂದ್ರ ಸರ್ಕಾರ ರೂಪಿಸಿದ್ದು, ರಾಜ್ಯ ಸರ್ಕಾರ ಇದನ್ನು ಅನುಷ್ಠಾನಕ್ಕೆ ತರಲು ಅನುದಾನ ಮಂಜೂರು ಮಾಡುತ್ತಿದೆ. ಆದರೆ, ಸುವವ್ಯಸ್ಥಿತವಾಗಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಆಡಳಿತ ವಿಭಾಗ ವಿಫಲಾಗುತ್ತಿದೆ.

ನಗರದ 29ನೇ ವಾರ್ಡ್‌ನಲ್ಲಿ ಕಳೆದ ಒಂದು ವರ್ಷದಿಂದ ಸಿದ್ಧಪಡಿಸಿದ ಶೌಚಾಲಯವನ್ನು ವಾರ್ಡ್‌ನ ಪ್ರತಿ ಮನೆಗಳ ಮುಂದೆ ಇಟ್ಟಿದ್ದರೂ ಅದನ್ನು ಉಪಯೋಗಿಸಲು ಅವಕಾಶ ನೀಡಿಲ್ಲ. ಶೌಚಾಲಯ ಬಳಕೆಗೆ ಹಲವು ಸಮಸ್ಯೆ ಎದುರಾಗಿದ್ದು ಇದನ್ನು ಅಧಿಕಾರಿಗಳು ಪರಿಹರಿಸಬೇಕಿದೆ. ಪ್ರತಿನಿತ್ಯವೂ ಶೌಚಾಲಯದ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ವಾರ್ಡ್‌ನ ನಿವಾಸಿಗಳು ದೂರುತ್ತಾರೆ.

ಈ ಭಾಗದಲ್ಲಿ ಕಳೆದ ಒಂದು ವರ್ಷಗಳಿಂದ ಶೌಚಾಲಯ ರೂಂಗಳನ್ನು ಇಟ್ಟಿದ್ದಾರೆ. ಆದರೆ ಅವುಗಳನ್ನು ಸಂಪೂರ್ಣ ಸಿದ್ಧಪಡಿಸಿಲ್ಲ. ಸಿದ್ಧಪಡಿಸುವಂತೆ ನಗರಸಭೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ವಾರ್ಡ್‌ ನ ಜನರೂ ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದಾರೆ. ಈ ಬಗ್ಗೆ ಯಾವ ಅಧಿಕಾರಿಗಳು ತಲೆಕೆಡಿಸಿಕೊಳ್ಳದೇ ಉಢಾಪೆ ಉತ್ತರ ನೀಡುತ್ತಾರೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೌಚಾಲಯ ನಿರ್ಮಾಣ ಜವಾಬ್ದಾರಿಯನ್ನು ಖಾಸಗಿ ಕಂಪನಿಯವರಿಗೆ ನೀಡಿದ್ದು, ಅವರನ್ನು ವಿಚಾರಿಸಿದರೆ ನಮಗೆ ಹಣ ಬಂದಿಲ್ಲ ನಾವೇನು ಮಾಡಲಿ ಎಂದು ಜಾರಿಕೊಳ್ಳುತ್ತಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಜನಸಾಮಾನ್ಯರು ತೊಂದರೆ ಅನುಭವಿಸುಂತಾಗಿದೆ.

ಶೌಚಾಲಯದ ನೀಡಿ ಎಂದು ಜನ ಅರ್ಜಿ ಹಾಕಿದ್ದರು. ಆದರೆ ಶೌಚಾಲಯವನ್ನು ನಗರಸಭೆಯಿಂದಲೇ ನಿರ್ಮಿಸಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ನಂತರ ಸಿದ್ಧ ಶೌಚ ರೂಂಗಳನ್ನು ತಂದಿಟ್ಟು ಒಂದೆರಡು ವರ್ಷಗಳೇ ಕಳೆದಿವೆ. ಆದರೆ, ಅದನ್ನು ಪೂರ್ಣವಾಗಿ ಸಿದ್ಧಪಡಿಸುವ ಗೋಜಿಗೆ ಹೋಗಿಲ್ಲ ಎನ್ನುತ್ತಾರೆ ನಿವಾಸಿಗಳು.

Advertisement

ಬಯಲು ಶೌಚ ಬೇಡ ಎಂದು ಎಲ್ಲರೂ ಹೇಳ್ತುತಾರೆ. ಆದರೆ, ಜನರಿಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ವಾರ್ಡ್‌ನ ಸಮೀರಾಭಾನು, ಮುನಿರಾಬೇಗಂ, ಭಾರತಮ್ಮ, ತಾಜ್‌, ಈರಮ್ಮ, ಷಂಷಾದಭಾನು, ಮೆಹಬೂಬ್‌ ಇತರರು ಆರೋಪಿಸಿದ್ದಾರೆ.

ಚುನಾವಣೆ ಹಾಗೂ ಇನ್ನಿತರ ಕೆಲಸ ಕಾರ್ಯಗಳ ನಡುವೆ ವಾರ್ಡ್‌ ನಲ್ಲಿನ ಶೌಚಾಲಯಗಳನ್ನು ಸಿದ್ಧಪಡಿಸಲು ಸಾಧ್ಯವಾಗಿರಲಿಲ್ಲ. ಈಗ ಚುನಾವಣೆ ಮುಗಿದಿದ್ದು, ಪೌರಾಯುಕ್ತರು ಸಹ ಆಗಮಿಸಿದ್ದು ಮುಂದಿನ ದಿನಗಳಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಎಲ್ಲರಿಗೂ ಶೌಚಾಲಯ ಒದಗಿಸಲಾಗುವುದು.
ಎಚ್. ಪ್ರಶಾಂತ್‌ಕುಮಾರ್‌,
29ನೇ ವಾರ್ಡ್‌ ಸದಸ್ಯ.

Advertisement

Udayavani is now on Telegram. Click here to join our channel and stay updated with the latest news.

Next