Advertisement

ಕಡ್ದಾಯವಾಗಿ ಮತದಾನ ಮಾಡಿ

05:23 PM Apr 05, 2019 | Naveen |

ಚಳ್ಳಕೆರೆ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಏ. 18ರಂದು ಮತದಾನ ನಡೆಯಲಿದ್ದು, ಅರ್ಹ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ತಾಲೂಕು ಸ್ವೀಪ್‌
ಸಮಿತಿ ಅಧ್ಯಕ್ಷ ಎಚ್‌.ಎಸ್‌. ಚಂದ್ರಶೇಖರ್‌ ಹೇಳಿದರು.

Advertisement

ನಗರದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಗುರುವಾರ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹಾಗೂ ಕಾಟಪ್ಪನಹಟ್ಟಿ, ಅಂಬೇಡ್ಕರ್‌ ನಗರ, ಗಾಂಧಿ ನಗರ ಸೂಕ್ಷ್ಮ ಮತಗಟ್ಟೆ ಕೇಂದ್ರಗಳಲ್ಲಿ ಜಾಗೃತಿ ಸಭೆ ನಡೆಸಿ ಅವರು ಮಾತನಾಡಿದರು. ಈಗಾಗಲೇ ಮತಗಟ್ಟೆ ಕೇಂದ್ರಗಳ ಎಲ್ಲಾ ಮತದಾರರಿಗೂ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಎಲ್ಲರೂ ತಪ್ಪದೆ ಮತ ಚಲಾಯಿಸುವಂತೆ ಮನವಿ ಮಾಡಿದರು.

ವೃತ್ತ ನಿರೀಕ್ಷಕ ಎನ್‌. ತಿಮ್ಮಣ್ಣ ಮಾತನಾಡಿ, ಈ ಹಿಂದೆ ಮತದಾನ ಸಂದರ್ಭದಲ್ಲಿ ನಡೆದ ಸಣ್ಣ ಪುಟ್ಟ ಅಹಿತಕರ ಘಟನೆಗಳನ್ನು ಆಧರಿಸಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮಮತಗಟ್ಟೆಗಳನ್ನು ಗುರುತಿಸಲಾಗಿದೆ. ಪೊಲೀಸ್‌ ಇಲಾಖೆ ಸದಾ ಕಾಲ ಶಾಂತಿಯುತ
ಚುನಾವಣೆಯನ್ನು ಬಯಸುತ್ತದೆ. ಕಾನೂನು ಬಾಹಿರವಾಗಿ ನಡೆದುಕೊಳ್ಳುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಹಾಯಕ ಚುನಾವಣಾಧಿಕಾರಿ ರಾಜಶೇಖರ್‌ ಮಾತನಾಡಿ, ಏ. 18 ರ ಮತದಾನದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಮತದಾರರನು ಚುನಾವಣಾ ಆಯೋಗದ ಗುರುತಿನ ಚೀಟಿಯನ್ನು
ಹೊಂದಿರಬೇಕು. ಆಧಾರ್‌, ಪಡಿತರ ಚೀಟಿ, ಬ್ಯಾಂಕ್‌ ಖಾತೆ ಪಾಸ್‌ಪುಸ್ತಕ, ಚಾಲನಾ ಪರವಾನಗಿ ಪತ್ರದ ಮೂಲಪ್ರತಿಯನ್ನು ಚುನಾವಣಾ ಧಿಕಾರಿಗಳಿಗೆ ನೀಡಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದ್ದಲ್ಲಿ ಮಾತ್ರ ಮತ ಚಲಾಯಿಸಬೇಕು. ಮತಗಟ್ಟೆ ಅ ಧಿಕಾರಿಗಳು ನೀಡುವ ಸೂಚನೆಗಳನ್ನು ಮತದಾನ ಸಂದರ್ಭದಲ್ಲಿ
ಪ್ರತಿಯೊಬ್ಬರೂ ಪಾಲಿಸಬೇಕೆಂದು ತಿಳಿಸಿದರು.

ತಾಲೂಕು ಸ್ವೀಫ್‌ ಸಮಿತಿ ನಿರ್ದೇಶಕ, ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ ಮತದಾನ ಪ್ರತಿಜ್ಞಾ ವಿಧಿಯನ್ನು ಬೋಧಿ ಸಿದರು. ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ಯಾಮಲಾ, ವಿನಯ್‌, ಸಹಾಯಕ ಇಂಜಿನಿಯರ್‌ ಲೋಕೇಶ್‌, ಕಂದಾಯಾ ಧಿಕಾರಿ ವಿ. ಈರಮ್ಮ, ನೈರ್ಮಲ್ಯ ಇಂಜಿನಿಯರ್‌ ನರೇಂದ್ರಬಾಬು, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಗಣೇಶ್‌, ನಿರ್ಮಲಾ, ನೀಲಕಂಠ ಆಚಾರ್‌, ಮಂಜುನಾಥ, ಮುಖ್ಯೋಪಾಧ್ಯಾಯ ಸಿ. ಗುರುಸಿದ್ಧಮೂರ್ತಿ, ಮತಗಟ್ಟೆ ಅ ಧಿಕಾರಿಗಳಾದ ಸುರೇಶ್‌, ಯೋಗೇಶ್ವರಿ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next