Advertisement

ಬೇರೆ ರಾಜ್ಯದಿಂದ ಬಂದವರು ನಿರಾಶ್ರಿತರ ಕೇಂದ್ರಕ್ಕೆ

05:59 PM May 09, 2020 | Naveen |

ಚಳ್ಳಕೆರೆ: ಕೋವಿಡ್ ವೈರಾಣು ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಿಂದ ಆಗಮಿಸಿದ್ದ ಒಟ್ಟು ನಾಲ್ವರನ್ನು ನಗರದ ಸರ್ಕಾರಿ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಅವರ ಸಂಪೂರ್ಣ ಮಾಹಿತಿ ದೊರೆಯದ್ದರಿಂದ ಜಿಲ್ಲಾಧಿಕಾರಿಗಳ ಸೂಚನೆ ಹಾಗೂ ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನರವರ ಮಾರ್ಗದರ್ಶನದಲ್ಲಿ ನಾಲ್ವರನ್ನು ಸಮಾಜಕಲ್ಯಾಣ ಇಲಾಖೆಯ ಜಿಲ್ಲಾ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಎನ್‌. ಪ್ರೇಮಸುಧಾ ತಿಳಿಸಿದರು.

Advertisement

ಒರಿಸ್ಸಾ, ಅಸ್ಸಾಂ, ಬಿಹಾರ್‌ ಮತ್ತು ಕೇರಳದಿಂದ ಒಟ್ಟು ನಾಲ್ವರು ವ್ಯಕ್ತಿಗಳು ವಲಸೆ ಕಾರ್ಮಿಕರಾಗಿ ಚಳ್ಳಕೆರೆಗೆ ಆಗಮಿಸಿದ್ದರು. ಆರೋಗ್ಯ ತಪಾಸಣೆ ನಡೆಸಿದ ನಂತರ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಕಳೆದ ಒಂದು ತಿಂಗಳಿನಿಂದ ಇವರ ಯೋಗಕ್ಷೇಮ ನೋಡಿಕೊಳ್ಳಲಾಗಿತ್ತು. ಆದರೆ ಇದುವರೆಗೂ ವಿಳಾಸ ಹಾಗೂ ಮಾಹಿತಿ ಪತ್ತೆಯಾಗದ ಹಿನ್ನೆಲೆಯಲ್ಲಿ ಜಿಲ್ಲಾ ನಿರಾಶ್ರಿತರ ಕೇಂದ್ರಕ್ಕೆ ರವಾನೆ ಮಾಡಲಾಗಿದೆ ಎಂದರು.

ಸಮಾಜಕಲ್ಯಾಣಾಧಿಕಾರಿ ಜಿ.ಆರ್‌. ಮಂಜಪ್ಪ ಮಾತನಾಡಿ, ತಾಲೂಕು ಟಾಸ್ಕ್ಪೋರ್ಸ್‌ ಸಮಿತಿ ಸುದೀರ್ಘ‌ ಚರ್ಚೆ ನಡೆಸಿ ಜಿಲ್ಲಾ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಿಕೊಡಲು ತೀರ್ಮಾನಿಸಿದೆ. ಹಾಗಾಗಿ ಅವರನ್ನು ಜಿಲ್ಲಾ ನಿರಾಶ್ರಿತರ ಕೇಂದ್ರಕ್ಕೆ ಕರೆದೊಯಲಾಗುತ್ತಿದೆ. ಅಲ್ಲಿ ಅಧಿಕಾರಿಗಳು ಮತ್ತೊಮ್ಮೆ ಕೂಲಂಕುಷ ತನಿಖೆ ನಡೆಸಿ ವಿಳಾಸವನ್ನು ಪತ್ತೆ ಹಚ್ಚಲಿದ್ದು,  ಆಮೇಲೆ ಅವರ ಸ್ವಂತ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಡಾ| ಶಮಾ ಪರ್ವಿನ್‌, ಆರೋಗ್ಯ ಇಲಾಖೆಯ ಎಸ್‌.ಬಿ. ತಿಪ್ಪೇಸ್ವಾಮಿ, ಎನ್‌. ಪ್ರೇಮಕುಮಾರ್‌, ಎನ್‌.ತಿಪ್ಪೇಸ್ವಾಮಿ, ಸ್ಟಾಫ್‌ ನರ್ಸ್‌ ಚಾಂದ್‌ಬೀ, ಬಾಲರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next