Advertisement
ಆರ್‌ಆರ್‌ಟಿ ತಂಡದವರು, ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಹೊರ ರಾಜ್ಯ ಮತ್ತು ಜಿಲ್ಲೆಯ ವ್ಯಕ್ತಿಗಳ ಚಲನವಲನದ ಮೇಲೆ ಗಮನವಿಟ್ಟು ಅವರನ್ನು ಪತ್ತೆ ಹಚ್ಚಿ ಕರೆತಂದು ಪರೀಕ್ಷೆ ನಡೆಸಿ ಕ್ವಾರಂಟೈನಲ್ಲಿಡಲಾಗಿದೆ. ಪ್ರಸ್ತುತ ಕಿತ್ತೂರು ರಾಣಿ ಚನ್ನಮ್ಮ, ಮೊರಾರ್ಜಿ, ಬಿಸಿಎಂ ಹಾಸ್ಟೆಲ್, ಆದರ್ಶ ಶಾಲೆ, ಬಾಲೇನಹಳ್ಳಿ ಇಂದಿರಾ ವಸತಿ ಶಾಲೆ ಮತ್ತಿತರರ ಕಡೆ 196 ಜನರನ್ನು ವಸತಿ ಕ್ವಾರಂಟೈನ್ ಮಾಡಲಾಗಿದೆ. ಇದರಲ್ಲಿ ಹೊರ ರಾಜ್ಯದ 56 ಕೂಲಿ ಕಾರ್ಮಿಕರೂ ಸೇರಿದ್ದಾರೆ. ಮೂರು ದಿನಗಳ ಹಿಂದೆ ಸರ್ಕಾರಿ ಆಸ್ಪತ್ರೆ ವೈದ್ಯರು, ಶುಶ್ರೂಷಕಿಯರು ಹಾಗೂ ಚಾಲಕರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಎಲ್ಲರ ವರದಿಯೂ ನೆಗೆಟಿವ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. Advertisement
196 ಜನರಿಗೆ ಹೋಂ ಕ್ವಾರಂಟೈನ್
01:03 PM May 21, 2020 | Naveen |
Advertisement
Udayavani is now on Telegram. Click here to join our channel and stay updated with the latest news.