Advertisement

ನಮೋ ಪ್ರಮಾಣ ವಚನ ವೀಕ್ಷಣೆಗೆ ವ್ಯವಸ್ಥೆ

12:36 PM May 31, 2019 | Team Udayavani |

ಚಳ್ಳಕೆರೆ: ರಾಷ್ಟ್ರದ 15ನೇ ಪ್ರಧಾನ ಮಂತ್ರಿಯಾಗಿ ನರೇಂದ್ರಮೋದಿ ಗುರುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮವನ್ನು ಸಾರ್ವಜನಿಕವಾಗಿ ವೀಕ್ಷಿಸಲು ನಗರದ ನಮೋ ಯುವ ಬ್ರಿಗೇಡ್‌ ಘಟಕ ಇಲ್ಲಿನ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ವಿಶೇಷ ಎಲ್ಇಡಿ ಸ್ಕ್ರೀನ್‌ ವ್ಯವಸ್ಥೆ ಮಾಡಿತ್ತು.

Advertisement

ರಾಷ್ಟ್ರದಲ್ಲಿ ಏಪ್ರಿಲ್ ಮತ್ತು ಮೇ ಎರಡು ತಿಂಗಳ ಅವಧಿಯಲ್ಲಿ ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಸಿದ್ದು, ದೇಶದ ಲೋಕಸಭಾ ಚುನಾವಣೆ ವಿಶ್ವಮಟ್ಟದಲ್ಲಿ ಚರ್ಚೆಯಾಗಿತ್ತು.

ಮೊದಲ ಅವಧಿಯ ಪ್ರಧಾನ ಮಂತ್ರಿಯಾಗಿ ಯಶಸ್ವಿಗೊಳಿಸಿದ ನರೇಂದ್ರಮೋದಿ ಮತ್ತೂಮ್ಮೆ 2ನೇ ಬಾರಿಗೆ ಅಧಿಕಾರ ಗದ್ದುಗೇರಲು ಕಾಂಗ್ರೆಸ್‌ ಪಕ್ಷವೂ ಸೇರಿದಂತೆ ಎಲ್ಲಾ ಪಕ್ಷಗಳ ಸಂಘಟಿತರಾಗಿ ನರೇಂದ್ರ ಮೋದಿಯವರನ್ನು ಅಧಿಕಾರದಿಂದ ದೂರವಿಡಲು ಶತಪ್ರಯತ್ನ ನಡೆಸಿದ್ದವು. ಆದರೆ, ರಾಷ್ಟ್ರದ ಶೇ. 50ರಷ್ಟು ಮತದಾರರು ನರೇಂದ್ರಮೋದಿಯವರ ಆಡಳಿತಕ್ಕೆ ಮೆಚ್ಚುಗೆ ನೀಡಿ ಎರಡನೇ ಬಾರಿಗೂ ಸಹ ರಾಷ್ಟ್ರದ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ನಗರದ ನಮೋ ಯುವ ಘಟಕ ಮಧ್ಯಾಹ್ನದಿಂದಲೇ ಬಿಎಂ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಎಲ್ಇಡಿ ಸ್ಕ್ರೀನ್‌ ಅಳವಡಿಸಿ ಸಾವಿರ ಸಾವಿರ ಸಂಖ್ಯೆಯಲ್ಲಿ ಸಾರ್ವಜನಿಕರು, ಮಹಿಳೆಯರು ಹಾಗೂ ಯುವಕರು ಪ್ರಧಾನ ಮಂತ್ರಿ ನರೇಂದ್ರಮೋದಿ ಹಾಗೂ ಅವರ ಮಂತ್ರಿ ಮಂಡಲದ ಸದಸ್ಯರು ಅಧಿಕಾರವನ್ನು ವಹಿಸಿಕೊಳ್ಳುವ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಎಲ್ಇಡಿ ಸ್ಕ್ರೀನ್‌ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದ ನಂತರ ಆಗಮಿಸಿದ್ದ ಸಾವಿರಾರು ಜನರಿಗೆ ಯುವ ಬ್ರಿಗೇಡ್‌ ಘಟಕದ ವತಿಯಿಂದ ಲಾಡು ವಿತರಿಸಿ ನರೇಂದ್ರ ಮೋದಿಯವರಿಗೆ ಜೈಕಾರ ಹಾಕಲಾಯಿತು.

Advertisement

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಮಂಡಿ ರಾಮದಾಸ್‌, ಎನ್‌. ಮಂಜುನಾಥ, ಗಂಗಾಧರ, ನಮೋ ಬ್ರಿಗೇಡ್‌ನ‌ ಯತೀಶ್‌, ವೆಂಕಟಲಕ್ಷಿ ್ಮೕಶ್ರೀವತ್ಸ(ಮಲ್ಲಿಕಾರ್ಜುನ ಶ್ರೀವತ್ಸ) ಇತರರು ಭಾಗವಹಿಸಿದ್ದರು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಡಿವೈಎಸ್ಪಿ ಎಸ್‌.ರೋಷನ್‌ ಜಮೀರ್‌, ವೃತ್ತ ನಿರೀಕ್ಷಕ ಎನ್‌.ತಿಮ್ಮಣ್ಣ ಮಾರ್ಗದರ್ಶನದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಎಪಿಎಂಸಿ ವರ್ತಕ ವೃಂದ ನಮೋ ಕಾರ್ಯಕ್ರಮ ವೀಕ್ಷಣೆ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಮಾರುಕಟ್ಟೆಯ ವರ್ತಕರು, ವಾಣಿಜ್ಯೋದ್ಯಮಿಗಳು ಹಾಗೂ ದಲ್ಲಾಲರ ಸಂಘದ ಪದಾಧಿಕಾರಿಗಳ ಸಹಕಾರದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧಿಕಾರ ಸ್ವೀಕಾರ ಸಮಾರಂಭವನ್ನು ನೋಡಲು ಬೃಹತ್‌ ಎಲ್ಇಡಿ ಟಿ.ವಿ. ವ್ಯವಸ್ಥೆ ಮಾಡಲಾಗಿತ್ತು.

ಇಲ್ಲಿನ ಮಾರುಕಟ್ಟೆಯ ಈರುಳ್ಳಿ ಖರೀದಿ ವಿಭಾಗದಲ್ಲಿ ಟಿವಿ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದು, 500ಕ್ಕೂ ಹೆಚ್ಚು ವರ್ತಕರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮವನ್ನು ವೀಕ್ಷಿಸಿದರು. ಮಾರುಕಟ್ಟೆಯ ದಲ್ಲಾಲರ ಸಂಘದ ಬಿಜೆಪಿ ಅಭಿಮಾನಿಗಳು ವೀಕ್ಷಣೆ ನಂತರ ಸಿಹಿ ನೀಡಿದಲ್ಲದೆ ಎಲ್ಲರಿಗೂ ಉಪಹಾರ ವ್ಯವಸ್ಥೆ ಕೈಗೊಂಡಿದ್ದರು.

ಈ ಸಂದರ್ಭದಲ್ಲಿ ದಲ್ಲಾಲರ ಸಂಘದ ಅಧ್ಯಕ್ಷ ಕೆ.ಎಂ. ಅರವಿಂದ, ಉಪಾಧ್ಯಕ್ಷ ಡಿ.ಎಂ.ತಿಪ್ಪೇಸ್ವಾಮಿ, ಎಚ್. ಗಂಗಣ್ಣ, ವಂದನಾರಾಜು, ಕೋಟ್ರೇಶ್‌, ತಿಪ್ಪೇಸ್ವಾಮಿ, ಬಿಜೆಪಿ ಯುವ ಮುಖಂಡ ಎಂ.ಎಸ್‌. ಜಯರಾಂ, ಮಂಡಲಾಧ್ಯಕ್ಷ ಬಿ.ವಿ. ಸಿರಿಯಣ್ಣ, ಎಸ್‌. ಯಲ್ಲಪ್ಪ, ಯುವ ಮೋರ್ಚಾ ಅಧ್ಯಕ್ಷ ಆರ್‌. ನಾಗೇಶ್‌ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next