Advertisement

ಚಳ್ಳಕೆರೆ: ಅಸ್ತಮಾ ರೋಗಿಗಳಿಗೆ ಉಚಿತ ಮಾತ್ರೆ ವಿತರಣೆ

05:06 PM Jun 10, 2019 | Naveen |

ಚಳ್ಳಕೆರೆ: ಪ್ರತಿ ವರ್ಷ ಮೃಗಶಿರಾ ಮಳೆ ಆರಂಭವಾಗುವಾಗ ನಗರದ ಖ್ಯಾತ ವೈದ್ಯ ಡಾ| ಎಚ್.ಸಿ. ತಿಪ್ಪೇಸ್ವಾಮಿ ಅಸ್ತಮಾ ರೋಗಿಗಳಿಗೆ ಉಚಿತ ಮಾತ್ರೆಯನ್ನುವಿತರಿಸುತ್ತಾ ಬಂದಿದ್ದಾರೆ. ಅದರಂತೆ ಈ ವರ್ಷ ಶನಿವಾರ ತಡ ರಾತ್ರಿ 1:05 ಗಂಟೆಗೆ ವಿವಿಧೆಡೆಗಳಿಂದ ಆಗಮಿಸಿದ್ದ ಅಸ್ತಮಾ ರೋಗಿಗಳಿಗೆ ಔಷಧ ನೀಡಿದರು.

Advertisement

ನಂತರ ಮಾತನಾಡಿದ ಡಾ| ಎಚ್.ಸಿ. ತಿಪ್ಪೇಸ್ವಾಮಿ, ಕಳೆದ 35 ವರ್ಷಗಳಿಂದ ನಿರಂತರವಾಗಿ ಪ್ರತಿ ವರ್ಷ ಮೃಗಶಿರಾ ಮಳೆ ಕೂಡುವ ಸಂದರ್ಭದಲ್ಲಿ ಸ್ವತಃ ತಯಾರಿಸಿದ ಮಾತ್ರೆಯನ್ನು ನೀಡುತ್ತೇನೆ. ಪ್ರತಿ ವರ್ಷಕ್ಕಿಂತ ಈ ವರ್ಷ ಹೆಚ್ಚು ರೋಗಿಗಳು ಆಗಮಿಸಿದ್ದರು. ಎಲ್ಲಾ ರೋಗಿಗಳಿಗೂ ಉಚಿತವಾಗಿ ಮಾತ್ರೆ ನೀಡಲಾಗಿದೆ. ರೋಗಿಗಳನ್ನು ಕರೆತಂದ ಸುಮಾರು 500ಕ್ಕೂ ಹೆಚ್ಚು ಜನರು ಸೇರಿದಂತೆ ಒಟ್ಟು 1500 ಜನರಿಗೆ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಮಾತ್ರೆ ಸೇವಿಸುವವರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು. ನಿಯಮಗಳನ್ನು ಉಲ್ಲಂಘಿಸಿದಲ್ಲಿ ತೊಂದರೆಯಾಗುತ್ತದೆ ಎಂದರು.

ಹಿರಿಯ ಸಹಕಾರಿ ಧುರೀಣ ಸಿ.ಬಿ. ಆದಿಭಾಸ್ಕರ ಶೆಟ್ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯಾವುದೇ ರೋಗಗಳಿಗೆ ಆಸ್ಪತ್ರೆಗೆ ಭೇಟಿ ನೀಡಿದಲ್ಲಿ ಹೆಚ್ಚಿನ ಚಿಕಿತ್ಸಾ ವೆಚ್ಚವನ್ನು ಭರಿಸಬೇಕಿದೆ. ಆದರೆ ಡಾ| ಎಚ್.ಸಿ. ತಿಪ್ಪೇಸ್ವಾಮಿಯವರು ಎಲ್ಲಾ ರೋಗಿಗಳಿಗೂ ಉಚಿತ ಮಾತ್ರೆ ನೀಡುವ ಮೂಲಕ ಸಾವಿರಾರು ರೋಗಿಗಳ ಅಸ್ತಮಾ ರೋಗ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಇವರ ಸೇವಾ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು.

ಸಿ.ಎಚ್. ಚಂದ್ರಶೇಖರ್‌, ನಾಗರಾಜು, ಧನಂಜಯ, ಆದಿಶ್ರವಣ್‌, ಹರಿನಿವಾಸ್‌, ಮಯೂರ, ಸಿ.ಎ.ಫಣಿನಂದಕುಮಾರ್‌ ಮತ್ತಿತರರು ಮಾತ್ರೆವಿತರಣೆಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next