Advertisement

ಚಳ್ಳಕೆರೆಯ ಮದಕರಿನಗರ ಸೀಲ್‌ಡೌನ್‌

01:37 PM Jul 01, 2020 | Naveen |

ಚಳ್ಳಕೆರೆ: ನಗರದ 24ನೇ ವಾರ್ಡ್‌ ವ್ಯಾಪ್ತಿಯ ಮದಕರಿ ನಗರದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಜ್ವರದಿಂದ ಬಳಲುತ್ತಿದ್ದರು. ಅವರನ್ನು ಇಲ್ಲಿನ ಜ್ವರ ಕ್ಲಿನಿಕ್‌ಗೆ ಕರೆದ್ಯೊದು ತಪಾಸಣೆ ನಡೆಸಿದ್ದು, ಇಬ್ಬರಲ್ಲೂ ಕೋವಿಡ್ ಪಾಸಿಟಿವ್‌ ಕಂಡು ಬಂದ ಹಿನ್ನೆಲೆಯಲ್ಲಿ ಮದಕರಿ ನಗರ ಅವರ ಮನೆಯ ಸುತ್ತಮುತ್ತಲಿನ ನೂರು ಮೀಟರ್‌ ವ್ಯಾಪ್ತಿ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ಪೌರಾಯುಕ್ತ ಪಿ. ಪಾಲಯ್ಯ ತಿಳಿಸಿದ್ದಾರೆ.

Advertisement

ವಾರ್ಡ್‌ ನಂ. 11ರ ವ್ಯಾಪ್ತಿಯ ದತ್ತಮಂದಿರ ರಸ್ತೆ, ಜೂ. 26 ರಂದು ಸೀಲ್‌ಡೌನ್‌ ಮಾಡಲಾಗಿದ್ದು, ಎರಡನೇ ಬಾರಿಗೆ 24ನೇ ವಾರ್ಡ್‌ನ ಮದಕರಿ ನಗರದ ಸಾಯಿಬಾಬಾ ದೇವಸ್ಥಾನದ ಬಳಿಯ ಪ್ರದೇಶವನ್ನು ಜೂನ್‌ 30 ರಂದು ಸೀಲ್‌ಡೌನ್‌ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮದಕರಿ ನಗರ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಚತಾ ಕಾರ್ಯವನ್ನು ಕೈಗೊಂಡು ದ್ರಾವಣ ಸಿಂಪಡಿಸಲಾಗಿದೆ. ಇನ್ನೂ ಎರಡು ದಿನಗಳ ಕಾಲ ಈ ಪ್ರದೇಶದಲ್ಲಿ ನಗರಸಭೆ ಸಿಬ್ಬಂದಿ ದ್ರಾವಣವನ್ನು ಸಿಂಪಡಿಸುವ ಜೊತೆಗೆ ಸಾರ್ವಜನಿಕರೂ ಸಹ ಮನೆಯಿಂದ ಹೊರಗೆ ಬಾರದಂತೆ ಮಾಸ್ಕ್ ಕಟ್ಟಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ವಾರ್ಡ್‌ನ ಸದಸ್ಯೆ ಆರ್‌. ಮಂಜುಳಾ ಪ್ರಸನ್ನಕುಮಾರ್‌, ಪ್ರಾರಂಭದ ಹಂತದಲ್ಲಿ ಮಾಹಿತಿ ಪಡೆದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮನವಿ ಮಾಡಿ ದಂಪತಿಯನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಳ್ಳಕೆರೆ ಮೂಲದ ಇವರು ಬೆಂಗಳೂರಿಗೆ ಹೋಗಿದ್ದು, ಅಲ್ಲಿ ಎರಡ್ಮೂರು ದಿನಗಳ ಕಾಲ ಬಂಧುಗಳ ಮನೆಯಲ್ಲಿದ್ದರು. ನಂತರ ಚಳ್ಳಕೆರೆಗೆ ಆಗಮಿಸಿದ ಸಂದರ್ಭದಲ್ಲಿ ಇವರಿಗೆ ಸೋಂಕು ತಗುಲಿದೆ ಎನ್ನಲಾಗಿದೆ.

ಇಲ್ಲಿನ ಬೆಂಗಳೂರು ರಸ್ತೆಯ ಸಿದ್ದಾಪುರ ಗ್ರಾಮದ ವೃದ್ದೆಯೋರ್ವರು ಸಹ ಬೆಂಗಳೂರಿಗೆ ತೆರಳಿ ಚಿಕಿತ್ಸೆ ಪಡೆದು ಚಳ್ಳಕೆರೆಗೆ ವಾಪಾಸ್‌ ಆಗಿದ್ದು, ಇವರಿಗೂ ಸಹ ಕೋವಿಡ್ ಪಾಸಿಟಿವ್‌ ಇರುವುದು ಧೃಢಪಟಿದ್ದು, ಮೂರು ಜನರನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಗರಸಭೆಯ ನೈರ್ಮಲ್ಯ ಇಂಜಿನಿಯರ್‌ ನರೇಂದ್ರಬಾಬು, ದಾದಾಪೀರ್‌, ನಗರಸಭಾ ಸದಸ್ಯ ಬಿ.ಟಿ. ರಮೇಶ್‌ ಗೌಡ, ಸೀಲ್‌ಡೌನ್‌ ಏರಿಯಾದಲ್ಲಿ ಸಂಚರಿಸಿ ಜನರಿಗೆ ಮಾಸ್ಕ್ ಧರಿಸಿ ಓಡಾಡುವಂತೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next