Advertisement

2ರಿಂದ ಇಂದ್ರಧನುಷ್‌ ಲಸಿಕೆ ಅಭಿಯಾನ

05:01 PM Nov 28, 2019 | Naveen |

ಚಳ್ಳಕೆರೆ: ಸಾರ್ವಜನಿಕರ ಆರೋಗ್ಯದ ಬಗ್ಗೆ ಸದಾಕಾಲ ವಿಶೇಷ ಜಾಗೃತಿ ವಹಿಸುತ್ತಿರುವ ಆರೋಗ್ಯ ಇಲಾಖೆಯ ಎಲ್ಲಾ ಜನಪರ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕಿದೆ. ವಿಶೇಷವಾಗಿ ಹುಟ್ಟಿದ ಮಗುವಿನಿಂದ ಎರಡು ವರ್ಷದ ಮಕ್ಕಳ ತನಕ ಯಾವುದೇ ರೋಗ ಸೊಂಕು ಉಂಟಾಗದಂತೆ ಇಂದ್ರ ಧನುಷ್‌ ಲಸಿಕೆ ಅಂದೋಲನ ಡಿ. 2 ರಿಂದ ಪ್ರಾರಂಭವಾಗಲಿದೆ.

Advertisement

ಈ ಆಂದೋಲನವನ್ನು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೈಜೋಡಿಸಬೇಕು ಎಂದು ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ ಹೇಳಿದರು. ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಇಂದ್ರಧನುಷ್‌ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರೋಗ್ಯ ಇಲಾಖೆ ಹಂತ ಹಂತವಾಗಿ ಅನೇಕ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಈ ಮೂಲಕ ತಾಲೂಕಿನ ಜನರ ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ| ಎನ್‌.ಪ್ರೇಮಸುಧಾ, ತಾಲೂಕಿನಾದ್ಯಂತ ಇದುವರೆಗೆ ಕೇವಲ 192 ಲಸಿಕೆ ವಂಚಿತ ಮಕ್ಕಳು ಹಾಗೂ 18 ಗರ್ಭಿಣಿಯರು ಪತ್ತೆಯಾಗಿದ್ದಾರೆ. ಡಿ. 2ರಿಂದ 9ರ ತನಕ ಈ ಅಂದೋಲನವನ್ನು ನಡೆಸುವ ಸಂದರ್ಭದಲ್ಲಿ ನಗರದ ಹಾಗೂ ಗ್ರಾಮಾಂತರ ಪ್ರದೇಶ, ಗುಡ್ಡಗಾಡು ಪ್ರದೇಶಗಳು, ಅಲೆಮಾರಿ ಸಮುದಾಯದವರು ವಾಸಿಸುವ ಸ್ಥಳಗಳು, ಗ್ರಾಮಾಂತರ ಪ್ರದೇಶ ವ್ಯಾಪ್ತಿಯಿಂದ ಪ್ರತ್ಯೇಕವಾಗಿ ವಾಸಿಸುವ ಕುಟುಂಬಗಳಿರುವ ಸ್ಥಳಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವರು. ಈ ಕಾರ್ಯಕ್ರಮಕ್ಕೆ ಅಧಿ ಕಾರಿ ವರ್ಗದ ಜೊತೆಗೆ ಚುನಾಯಿತ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಸದಸ್ಯರು, ಮಹಿಳಾ ಸಂಘಗಳ ಸದಸ್ಯರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಪೂರ್ವಭಾವಿ ಸಭೆಯಲ್ಲಿ ಶಿಶು ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ನಗರಸಭೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಎನ್‌.ಪ್ರೇಮಕುಮಾರ್‌ ಸ್ವಾಗತಿಸಿದರು. ಎಸ್‌.ಬಿ. ತಿಪ್ಪೇಸ್ವಾಮಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next