Advertisement

ಕೋವಿಡ್ ವಾರಿಯರ್ಸ್ ಗೆ ಅಗತ್ಯ ಸಲಕರಣೆ: ಡಾ|ಪ್ರೇಮಸುಧಾ

05:36 PM May 14, 2020 | Naveen |

ಚಳ್ಳಕೆರೆ: ನಗರದ ಬಿಸಿಎಂ ಹಾಸ್ಟೆಲ್‌ ಸೇರಿದಂತೆ ವಿವಿಧೆಡೆ ವಸತಿ ಕ್ವಾರಂಟೈನ್‌ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ, ಪೊಲೀಸ್‌ ಹಾಗೂ ಇತರೆ ಸಿಬ್ಬಂದಿ ವರ್ಗಕ್ಕೆ ಮಾಸ್ಕ್, ಹ್ಯಾಂಡ್‌
ಗ್ಲೌಸ್‌ ಹಾಗೂ ಇತರೆ ಸಲಕರಣೆಗಳನ್ನು ನೀಡಲಾಗಿದೆ. ವಸತಿ ಕ್ವಾರಂಟೈನ್‌ ನಲ್ಲಿರುವವರಿಗೂ ಮಾಸ್ಕ್ ಹಾಗೂ ಸ್ಯಾನಿಟೈಸರ್‌ ಒದಗಿಸಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ
ಡಾ| ಎನ್‌. ಪ್ರೇಮಸುಧಾ ತಿಳಿಸಿದ್ದಾರೆ.

Advertisement

ನಗರದ ಬಿಸಿಎಂ ಹಾಸ್ಟೆಲ್‌ನಲ್ಲಿ 27, ಬಾಲೇನಹಳ್ಳಿಯ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ 15 ಜನ ಸೇರಿದಂತೆ ಒಟ್ಟು 42 ಜನರು ವಸತಿ ಕ್ವಾರಂಟೈನ್‌ನಲ್ಲಿದ್ದಾರೆ. ಎಲ್ಲರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 8 ಜನರ ವರದಿ ನೆಗೆಟಿವ್‌ ಆಗಿದೆ. ತಾಲೂಕಿಗೆ ಯಾವುದೇ ಹೊಸಬರು ಆಗಮಿಸಿದರೂ ಅವರನ್ನು ಕರೆತಂದು ಆರೋಗ್ಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದರು. ಆರೋಗ್ಯ ಇಲಾಖೆಯ ಎನ್‌. ಪ್ರೇಮಕುಮಾರ್‌, ಎಚ್‌. ತಿಪ್ಪೇಸ್ವಾಮಿ, ಓಬಳೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next