Advertisement
ಯಾವುದೇ ಅನುಮತಿ ಪಡೆಯದೆ ತಮಿಳುನಾಡಿನ ಚೆನ್ನೈನಿಂದ ಕೋಡಿಹಳ್ಳಿಗೆ ಆಗಮಿಸಿದ್ದರಲ್ಲದೆ ಎಲ್ಲೆಂದರಲ್ಲಿ ಓಡಾಡಿಕೊಂಡು ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್ ದೂರಿನಂತೆ ಆ ವ್ಯಕ್ತಿ ವಿರುದ್ಧ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೋವಿಡ್ ಸೋಂಕಿತ ತಮಿಳುನಾಡಿನ ಚೆನ್ನೈನಿಂದ ಖಾಸಗಿ ವಾಹನದಲ್ಲಿ ಬೆಂಗಳೂರು, ಚಿತ್ರದುರ್ಗ, ಚಳ್ಳಕೆರೆ, ಆಂಧ್ರಪ್ರದೇಶ ಹಾಗೂ ಮೊಳಕಾಲ್ಮೂರು ತಾಲೂಕಿನ ಕೆಲ ಗ್ರಾಮಗಳಲ್ಲಿ ಯಾವುದೇ ಅನುಮತಿ ಪಡೆಯದೆ ನಿರಂತರ ಪ್ರವಾಸ ಕೈಗೊಂಡಿದ್ದ. ಇದರಿಂದ ಕೋಡಿಹಳ್ಳಿ ಹಾಗೂ ಚಿಕ್ಕಹಳ್ಳಿ ಸೀಲ್‌ಡೌನ್ ಆಗಿದ್ದು, ಸಾರ್ವಜನಿಕರ ಅಶಾಂತಿಗೂ ಕಾರಣವಾಗಿರುತ್ತಾನೆ. ಈ ಹಿನ್ನೆಲೆಯಲ್ಲಿ ಈತ ಹಾಗೂ ಈತನ ಸಂಬಂಧಿಕನ ಮೇಲೆ ನ್ಯಾಷನಲ್ ಡಿಸಾಷ್ಟರ್ ಮ್ಯಾನೇಜ್‌ಮೆಂಟ್ ಅಥಾರಟಿ ಆ್ಯಕ್ಟ್-2005ರ ಸೆಕ್ಷನ್-51, 60 ಪ್ರಕಾರ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. Advertisement
ಕೋವಿಡ್ ಸೋಂಕಿತ ಸೇರಿ ಇಬ್ಬರ ವಿರುದ್ಧ ಪ್ರಕರಣ
05:17 PM May 17, 2020 | Naveen |
Advertisement
Udayavani is now on Telegram. Click here to join our channel and stay updated with the latest news.