Advertisement

ಜಗಜ್ಯೋತಿ ಬಸವೇಶ್ವರರಿಂದ ಧಾರ್ಮಿಕ ಜಾಗೃತಿ

06:03 PM Apr 27, 2020 | Naveen |

ಚಳ್ಳಕೆರೆ: ಜಗಜ್ಯೋತಿ ಬಸವೇಶ್ವರರು ಸಮಾಜದಲ್ಲಿ ಧಾರ್ಮಿಕ ಜಾಗೃತಿ ಯನ್ನುಂಟು ಮಾಡಲು ವಚನ ಸಾಹಿತ್ಯದ ಮೂಲಕ ಶ್ರಮಿಸಿದರು. ಆದ್ದರಿಂದ ಪ್ರತಿಯೊಬ್ಬರೂ ಬಸವ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಶಾಸಕ ಟಿ.ರಘುಮೂರ್ತಿ ಕರೆ ನೀಡಿದರು.

Advertisement

ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ವೀರಶೈವ ಕಲ್ಯಾಣಮಂಟಪದಲ್ಲಿ ವೀರಶೈವ ಸಮಾಜದ ವತಿಯಿಂದ ಸಮಾಜದ ಬಡವರಿಗೆ ಆಹಾರ ಕಿಟ್‌ಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು. ಕೋವಿಡ್ ವೈರಾಣು ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಈ ಕಾರ್ಯಕ್ರಮವನ್ನು ಸರಳವಾಗಿ ಆಯೋಜಿಸಲಾಗಿದೆ. ಜಗಜ್ಯೋತಿ ಬಸವೇಶ್ವರರು ಪ್ರಾರಂಭದ ಹಂತದಲ್ಲಿ ಎಲ್ಲಾ ಸಮುದಾಯಗಳಿಂದ ಟೀಕೆಗಳನ್ನು ಅನುಭವಿಸಿದರೂ ತಮ್ಮ ಕಾರ್ಯವನ್ನು ಪರಿ ಪೂರ್ಣಗೊಳಿಸುವಲ್ಲಿ ಸಫಲರಾದರು ಎಂದರು.

ವೀರಶೈವ ಸೇವಾ ಸಮಾಜದ ಅಧ್ಯಕ್ಷ ಎಂ. ಗಂಗಣ್ಣ ಮಾತನಾಡಿ, ಕೋವಿಡ್ ವೈರಾಣು ನಿಯಂತ್ರಣದ ಹಿನ್ನೆಲೆಯಲ್ಲಿ ಶಾಸಕರ ಮಾರ್ಗದರ್ಶನದಲ್ಲಿ ಹಲವಾರು ರೀತಿಯ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿವೆ. ನಮ್ಮ ಸಮಾಜದ ಬಡವರಿಗೆ ಉಚಿತವಾಗಿ ಅಕ್ಕಿ, ಬೇಳೆ ಇನ್ನಿತರ ಸಾಮಗ್ರಗಳುಳ್ಳ ಆಹಾರ ಕಿಟ್‌ ಗಳನ್ನು ನೀಡಿದ್ದೇವೆ. ಪ್ರತಿಯೊಬ್ಬರೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಬಿ.ಎಸ್‌. ಶಿವಪುತ್ರಪ್ಪ, ಕೆ.ಎಂ. ಅರವಿಂದಕುಮಾರ್‌, ಎಚ್‌.ವಿ. ಸ್ವಾಮಿ, ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ಡಿ. ಶ್ರೀನಿವಾಸ್‌, ಚಂದ್ರಶೇಖರ್‌, ಸ್ವಾಮಿ, ರಾಜೇಶ್‌, ನಗರಸಭಾ ಸದಸ್ಯರಾದ ಎಂ. ಸಾವಿತ್ರಿ, ಕೆ. ವೀರಭದ್ರಪ್ಪ, ರಮೇಶ್‌ ಗೌಡ, ಕೆ.ಸಿ. ನಾಗರಾಜು, ಹೊಟ್ಟೆಪ್ಪನಹಳ್ಳಿ ಪ್ರಸನ್ನಕುಮಾರ್‌, ರವಿಕುಮಾರ್‌, ಕೆ.ಎಂ. ಜಗದೀಶ್‌, ರೇವಣ್ಣ ಮೊದಲಾದವರು ಭಾಗವಹಿಸಿದ್ದರು. ಶಾಸಕರು ವೀರಭದ್ರಸ್ವಾಮಿ ವೃತ್ತದಲ್ಲಿರುವ ಬಸವೇಶ್ವರರ ಪುತ್ಥಳಿಗೂ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next