Advertisement

ಬಾಹುಬಲಿ ಸ್ವಾಮಿಗೆ ಮಹಾ ಮಸ್ತಕಾಭಿಷೇಕ

07:35 PM Feb 01, 2020 | Naveen |

ಚಳ್ಳಕೆರೆ: ನಗರದ ಮಹಾದೇವಿ ರಸ್ತೆಯ ಪುಣ್ಯ ನಗರಿಯಲ್ಲಿ ಜೈನ ಸಮುದಾಯ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಬಾಹುಬಲಿ ಸ್ವಾಮಿಗೆ ಮಹಾ ಮಸ್ತಕಾಭಿಷೇಕ ದೊಂದಿಗೆ ಮುಕ್ತಾಯವಾಗಿದ್ದು, ಈ ಕಾರ್ಯ ಕ್ರಮದಲ್ಲಿ ಸಮುದಾಯದ ಹಲವಾರು ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು.

Advertisement

ಶ್ರವಣಬೆಳಗೋಳದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಭುವನಕೀರ್ತಿ ಭಟ್ಟಾರಕ ಪಟ್ಟಾಚಾ ರ್ಯವರ್ಯ ಸ್ವಾಮೀಜಿ, ಧವಲಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಭಾನುಕೀರ್ತಿ ಭಟ್ಟಾರಕ ಪಟ್ಟಾ ಚಾರ್ಯ ವರ್ಯ ಸ್ವಾಮೀಜಿ, ಭಟ್ಟಾಕಳಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮುಂತಾದವರು ಮಹಾ ಮಸ್ತಕಾಭಿಷೇಕದ ನೇತೃತ್ವ ವಹಿಸಿದ್ದರು.

ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಇಲ್ಲಿನ ಜೈನ ಸಮುದಾಯದ ಎಲ್ಲರೂ ಸೇರಿ ಈ ಒಂದು ಅಪೂರ್ವ ಕಾರ್ಯಕ್ರಮ. ಭಕ್ತಿ, ಶ್ರದ್ಧೆ ಮತ್ತು ಜೈನ ಧರ್ಮದ ಉಳಿವಿಗಾಗಿ ಮತ್ತು ಈ ಧರ್ಮದ ಪರಂಪರೆಗಾಗಿ ಮಾಡಿರುವಿರಿ. ಪ್ರತಿಯೊಂದು ಹಂತದಲ್ಲೂ ಇಲ್ಲಿ ನಡೆದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಭಗವಾನ್‌ ಬಾಹುಬಲಿಯ ಸಂಪೂರ್ಣ
ಕೃಪೆ ಮತ್ತು ಆಶೀರ್ವಾದ ನಿಮ್ಮ ಮೇಲೆ ಸದಾ ಕಾಲವಿರುತ್ತದೆ. ಕಳೆದ ನೂರಾರು ವರ್ಷಗಳಿಂದ ಈ ಸಂಪ್ರದಾಯವನ್ನು ಆಚರಿಸುತ್ತಾ ಬಂದಿರುವ ನಾವೆಲ್ಲರೂ
ಧರ್ಮದ ಉಳಿವಿಗಾಗಿ ಸಮಾಜದ ಉನ್ನತಿಗಾಗಿ ಶ್ರಮಿಸಬೇಕಿದೆ. ಮುಂದಿನ ದಿನಗಳಲ್ಲೂ ಸಹ ಇಲ್ಲಿನ ಎಲ್ಲಾ ಭಕ್ತರು ಇಂತಹ ಪುಣ್ಯಕಾರ್ಯವನ್ನು ಹೆಚ್ಚು ಹೆಚ್ಚು ನಡೆಸಿ ಬಾಹುಬಲಿ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.

ಮಾಜಿ ಸಚಿವ ಡಿ.ಸುಧಾಕರ ಮಾತನಾಡಿ, ನಗರದಲ್ಲಿ ಇದೇ ಮೊದಲ ಬಾರಿಗೆ ನಮ್ಮ ಸಮುದಾಯದ ವತಿಯಿಂದ ಇಂತಹ ಬೃಹತ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಳೆದ ಹಲವಾರು ವರ್ಷಗಳಿಂದ ಬಾಹುಬಲಿ ಮಹಾಮಸ್ತಾಭಿಷೇಕ ಹಾಗೂ ವಿಗ್ರಹ ಪ್ರತಿಷ್ಠಾಪನೆ ಮಾಡಬೇಕೆಂಬ ಇಲ್ಲಿನ ಭಕ್ತರ ಕನಸು ನನಸಾದ ಸುದಿನ ಇದಾಗಿದೆ. ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನದಂತೆ ಸಮುದಾಯದ ವತಿಯಿಂದ ಮುಂದಿನ
ದಿನಗಳಲ್ಲೂ ಸಹ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಕಾರ್ಯಕ್ರಮದ
ಯಶಸ್ಸಿಗೆ ಸಹಕರಿಸಿದ ಸಮುದಾಯ ಹಾಗೂ ಸಮಾಜದ ಎಲ್ಲಾ ಮುಖಂಡರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.108 ಪುಣ್ಯಸಾಗರಮುನಿ ಮಹಾರಾಜರು, ಮುನಿಶ್ರೀ108 ಅಮೋಘ ಕೀರ್ತಿಜೀ ಮಹಾರಾಜರು, 108 ಅಮರಕೀರ್ತಿ ಶ್ರೀಮಹಾರಾಜರು, ಡಿ.ಭರತ್‌ರಾಜ್‌,
ಡಿ.ಅಂಬಣ್ಣ, ಡಿ.ಪ್ರಭಾಕರ್‌, ವಿಜಯೇಂದ್ರ, ಗೌರಿಪುರ ಪಾಶ್ವನಾಥ, ಎನ್‌.ಜೆ.ವೆಂಕಟೇಶ್‌, ಸಚಿನ್‌, ದರ್ಶನ್‌, ನಾಗರಾಜು, ಚೇತನ್‌, ರತ್ನರಾಜ್‌, ವಿಮುಕ್ತ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next