Advertisement

ಮುಂಬಯಿಯಲ್ಲಿ ಚಕ್ರವ್ಯೂಹ, ಜಟಾಯುಮೋಕ್ಷ

06:00 AM Mar 30, 2018 | Team Udayavani |

 ಮುಂಬಯಿಯ ಎನ್‌ಸಿಪಿಎ ಆಯೋಜಿಸಿದ “ದಿ ಸಾಂಗ್‌ ಆಫ್ಯಕ್ಷಾಸ್‌ : ಯಕ್ಷಗಾನ ಆಫ್ ಕೋಸ್ಟಲ್‌ ಕರ್ನಾಟಕ’ ಕಲೋತ್ಸವದಲ್ಲಿ ಉಡುಪಿಯ ಯಕ್ಷಗಾನ ಕೇಂದ್ರ ಮತ್ತು ಥಿಯೇಟರ್‌ ಯಕ್ಷದ ಕಲಾವಿದರು ಉಭಯತಿಟ್ಟುಗಳ ಎರಡು ಆಖ್ಯಾನಗಳನ್ನು ಮಾ.17 ಮತ್ತು 18 ರಂದು ಪ್ರಸ್ತುತಪಡಿಸಿದರು.ಮೊದಲ ದಿನ ಥಿಯೇಟರ್‌ ಯಕ್ಷದ ಕಲಾವಿದರು ತೆಂಕುತಿಟ್ಟಿನ ಪ್ರಯೋಗಾತ್ಮಕ ಚಕ್ರವ್ಯೂಹ ಮತ್ತು ಎರಡನೆಯ ದಿನ ಯಕ್ಷಗಾನದ ಕೇಂದ್ರದ ಕಲಾವಿದರು ಜಟಾಯು ಮೋಕ್ಷ ಪ್ರದರ್ಶಿಸಿದರು. ಎರಡೂ ಪ್ರದರ್ಶನಗಳನ್ನು ಗುರು ಬನ್ನಂಜೆ ಸಂಜೀವ ಸುವರ್ಣ ನಿರ್ದೇಶಿಸಿದ್ದರು.  


ಎನ್‌ಸಿಪಿಎಯ ಭಾರತೀಯ ಸಂಗೀತ ಕಾರ್ಯಕ್ರಮಗಳ ಸಂಯೋಜನಾ ಮುಖ್ಯಸ್ಥೆ ಡಾ| ಸುವರ್ಣಲತಾ ರಾವ್‌ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ದಿಲ್ಲಿಯ ಅಮೆರಿಕನ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯನ್‌ ಸ್ಟಡೀಸ್‌ನ ಪ್ರಾಚ್ಯವಸ್ತು ಸಂಗ್ರಹಾಲಯದ ಮುಖ್ಯಸ್ಥೆ ಡಾ| ಶುಭಾ ಚೌಧುರಿ ಪ್ರದರ್ಶನದ ಕಥಾನಕಗಳ ವಿವರ ನೀಡಿದರು. ದೆಹಲಿಯ ಜೆಎನ್‌ಯುನ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಯಕ್ಷಗಾನದ ಇತಿಹಾಸ ಮತ್ತು ಸಮಕಾಲೀನ ಬೆಳವಣಿಗೆಗಳ ಬಗ್ಗೆ ಸಚಿತ್ರವಿವರಣೆಯನ್ನು ಮಂಡಿಸಿದರು. ಬಳಿಕ ಪ್ರೇಕ್ಷಕರು ಕಲಾವಿದರೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next