Advertisement

ವಿವೇಕಾನಂದರ ಸಮಗ್ರ ಜೀವನ ಅರಿಯವುದು ಸವಾಲು: ಚಕ್ರವರ್ತಿ ಸೂಲಿಬೆಲೆ

10:05 AM Jan 28, 2020 | sudhir |

ಮಹಾನಗರ: ವಿವೇಕಾನಂದರ ಸಮಗ್ರ ಜೀವನವನ್ನು ಅರಿಯುವುದು ನಮ್ಮ ಜೀವನದ ದೊಡ್ಡ ಸವಾಲು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

Advertisement

ನಗರದ ಎಸ್‌ಡಿಎಂ ಉದ್ಯಮಾಡಳಿತ ಮತ್ತು ಕಾನೂನು ಕಾಲೇಜಿನಲ್ಲಿ ಸೋಮವಾರ ನಡೆದ “ವಿವೇಕೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿವೇಕಾನಂದರು ಅಂದರೆ ಆನೆಗೆ ಸಮಾನ ನಾವು ಅವರ ಮುಂದೆ ಕುರುಡರ ಸಮಾನ ಅವರು ಸಮಸ್ತ ಮನುಕುಲವನ್ನು ರಾಷ್ಟ್ರಕ್ಕೋಸ್ಕರ ಸಮರ್ಪಿಸಿದರು ಎಂದು ತಿಳಿಸಿದರು.

ಯುವಕರು ಹಾಳಾಗಿದ್ದಾರೆ ಎಂದು ಅನೇಕರು ಹೇಳುತ್ತಾರೆ. ನನ್ನ ಪ್ರಕಾರ ಅದು ತಪ್ಪು. ಯುವಕರು ಹಾಳಾಗಿಲ್ಲ. ಬದಲಾಗಿ ಅವರಿಗೆ ಮಾರ್ಗದರ್ಶನದ ಕೊರತೆ ಇದೆಯಷ್ಟೇ. ವಿವೇಕಾನಂದರು ಬದುಕಿದ್ದು, ಕೇವಲ 39 ವರ್ಷ 5 ತಿಂಗಳು ಮತ್ತು 24 ದಿನ. ಅವರು ಯುವಕರ ಕಣ್ಮಣಿ. ಅವರ ಜೀವನವನ್ನು ಯುವಕರಿಗೆ ಪರಿಚಯ ಮಾಡುವ ಕೆಲಸ ಮಾಡಬೇಕಿದೆ ಎಂದರು.

ವಿವೇಕಾನಂದರು ತನ್ನ ಸಾವನ್ನು ಮುಂಚಿತವಾಗಿಯೇ ಊಹಿಸಿದ್ದರು. ಅವರಿಗೆ ನಿಧನರಾಗುವ ಸಮಯದಲ್ಲಿ ಎರಡು ದೊಡ್ಡ ಆಸೆ ಇತ್ತು. ವೇದಕ್ಕೋಸ್ಕರ ವಿದ್ಯಾಲಯ ಸ್ಥಾಪನೆಯಾಗಬೇಕು, ಹೆಣ್ಮಕ್ಕಳಿಗೆ ಶಾರದಾ ಮಠ ಹೆಸರಿನಲ್ಲಿ ಮಠವೊಂದು ಸ್ಥಾಪನೆಯಾಗಬೇಕು ಎಂಬ ಕನಸು ಅವರದ್ದಾಗಿತ್ತು ಎಂದು ತಿಳಿಸಿದರು.

ಪಾಶ್ಚಾತ್ಯರಿಗೆ ಭಾರತೀಯ ಗುಣವನ್ನು ಪರಿಚಯಿಸುವ ವಿಶಿಷ್ಟ Â ವಿವೇಕಾನಂದರಲ್ಲಿತ್ತು. ಇಂದು ಕೂಡ ಭಾರತಕ್ಕೆ ಜಾಗತಿಕ ಮಟ್ಟದ ಗೌರವವಿದೆ. ಆರ್ಥಿಕತೆಯಲ್ಲಿ ಭಾರತ ಸಂಕಷ್ಟದಲ್ಲಿದ್ದರೂ, ವಿದೇಶಿ ವಿನಿಮಯದಲ್ಲಿ ಏರಿಕೆ ಕಂಡಿದೆ. ಸಂವಿಧಾನದ 370ನೇ ವಿಧಿ ರದ್ದುಗೊಳಿಸುವಾಗ ಭಾರತ ಅಲ್ಲೋಲ ಕಲ್ಲೋಲ ಆಗುತ್ತದೆ ಎಂದು ಇತರೇ ರಾಷ್ಟ್ರಗಳು ಅಂದುಕೊಂಡಿದ್ದವು. ಆದರೆ, ಮಲೇಷ್ಯಾ, ಚೀನಾ ಬಿಟ್ಟು ಬೇರೆ ಯಾವ ದೇಶ ಕೂಡ ಭಾರತವನ್ನು ವಿರೋಧಿಸಲಿಲ್ಲ. ಇದೀಗ ಭಾರತ ಗಗನ ಯಾನಕ್ಕೆ ಸಿದ್ಧವಾಗುತ್ತಿದೆ. ಇದುವೇ ನವ ಭಾರತ ಎಂದು ವಿಶ್ಲೇಷಿಸಿದರು.
ಕಾಲೇಜಿನ ಪ್ರಾಂಶುಪಾಲೆ ಅರುಣಾ ಕಾಮತ್‌ ಸೇರಿದಂತೆ ಮತ್ತಿತರರು ಇದ್ದರು.

Advertisement

ತಾರುಣ್ಯದ ಬಗ್ಗೆ ವಿಶ್ಲೇಷಣೆ
“ವಿವೇಕಾನಂದರು ತಾರುಣ್ಯದ ಬಗ್ಗೆ ವಿಶ್ಲೇಷಣೆ ನೀಡಿದ್ದಾರೆ. ತಾರುಣ್ಯ ಅಂದರೆ ಆ ಮನುಷ್ಯನಲ್ಲಿ ಕಬ್ಬಿಣದ ಮಾಂಸಖಂಡ ಇರಬೇಕು, ಉಕ್ಕಿನ ನರಮಂಡಲ ಇರಬೇಕು, ತಾರುಣ್ಯ ಅಂದರೆ ತನ್ನ ಮನಸ್ಸಿನ ಶಕ್ತಿ ಚುರುಕಾಗಿರಬೇಕು ಎಂಬುವುದಾಗಿ ವಿಶ್ಲೇಷಿಸಿದ್ದಾರೆ. ಮನುಷ್ಯನ ಮನಸ್ಸು ತನ್ನ ನಿಯಂತ್ರಣದಲ್ಲಿಲ್ಲ. ಗಮನದಲ್ಲಿಟ್ಟು ಕೆಲಸ ಮಾಡದೆ ಮನಸ್ಸಿನ ನಿಯಂತ್ರಣ ಕಳೆದುಕೊಂಡಿದೆ’ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next