Advertisement

Chaitra Kundapura: ಚೈತ್ರಾ ಕುಂದಾಪುರ ವಿರುದ್ಧ ಮತ್ತೂಂದು ಪ್ರಕರಣ ದಾಖಲು…

09:35 AM Sep 19, 2023 | Team Udayavani |

ಉಡುಪಿ: ಉದ್ಯಮಿ, ಬಿಜೆಪಿ ಮುಖಂಡ ಗೋವಿಂದ ಬಾಬು ಪೂಜಾರಿಗೆ ಎಂಎಲ್‌ಎ ಟಿಕೆಟ್‌ ನೀಡುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ಬೆನ್ನಲ್ಲೇ ಚೈತ್ರಾ ಕುಂದಾಪುರ ವಿರುದ್ಧ ಮತ್ತೂಂದು ವಂಚನೆ ಪ್ರಕರಣ ಕೋಟ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

Advertisement

ಬ್ರಹ್ಮಾವರ ತಾಲೂಕು ಕೋಡಿಕನ್ಯಾಣ ನಿವಾಸಿ ಸುದೀನ ಅವರಿಗೆ ಬಟ್ಟೆ ಅಂಗಡಿ ಹಾಕಿಕೊಡುವುದಾಗಿ ನಂಬಿಸಿ ಸುಮಾರು 5 ಲಕ್ಷ ರೂ. ಪಡೆದು ಬಟ್ಟೆ ಅಂಗಡಿಯನ್ನು ಹಾಕಿ ಕೊಡದೆ ಹಣವನ್ನು ಮರಳಿಸದೆ ಜೀವ ಬೆದರಿಕೆ ಹಾಕಿ ವಂಚಿಸಿ, ವಿಶ್ವಾಸ ದ್ರೋಹ ಎಸಗಿರುವುದಾಗಿ ದೂರಲಾಗಿದೆ.

ತಾನು ಮೀನು ವ್ಯಾಪಾರವನ್ನು ನಡೆಸಿಕೊಂಡು ಬಂದಿದ್ದು, 2015ರಲ್ಲಿ ಚೈತ್ರಾ ಕುಂದಾಪುರ ಪರಿಚಯವಾಗಿತ್ತು. ತಾನು ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿದ್ದು, ಹಲವು ಮಂತ್ರಿಗಳ, ಸಚಿವರ ಹಾಗೂ ಶಾಸಕರ ನಿಕಟ ಸಂಪರ್ಕದಲ್ಲಿರುವು ದಾಗಿ ತಿಳಿಸಿ ಉಡುಪಿ ಹಾಗೂ ಕೋಟದಲ್ಲಿ ಬಟ್ಟೆ ಅಂಗಡಿಯನ್ನು ಹಾಕಿಕೊಡುವುದಾಗಿ ತಿಳಿಸಿದ್ದಳು. ಬಳಿಕ ಚೈತ್ರಾ ಕುಂದಾಪುರ ಪದೇ ಪದೇ ಕರೆ ಮಾಡಿ ಸುದೀನ ಅವರಿಂದ 2018ರಿಂದ 2022ರ ವರೆಗೆ ಸುಮಾರು ಐದು ಲಕ್ಷ ರೂ. ಪಡೆದಿದ್ದಾಳೆ.

ಸುಮಾರು ಮೂರು ಲಕ್ಷ ಹಣವನ್ನು ಸುದೀನ ತನ್ನ ಖಾತೆ ಹೊಂದಿದ ವಿಜಯವಾಡ ಶಾಖೆಯ ಕೋಟಕ್‌ ಮಹಿಂದ್ರ ಬ್ಯಾಂಕ್‌ ಹಾಗೂ ಕರ್ಣಾಟಕ ಬ್ಯಾಂಕ್‌ ಸಾಸ್ತಾನ ಶಾಖೆಯ ಖಾತೆಯಿಂದ ಚೈತ್ರಾಳ ಖಾತೆಗೆ ವರ್ಗಾಯಿಸಿದ್ದರು. ಇನ್ನುಳಿದ ಮೊತ್ತವನ್ನು ನಗದಾಗಿ 2023ರ ತನಕ ಆಕೆಗೆ ನೀಡಿದ್ದರು.

ಅನಂತರದ ದಿನಗಳಲ್ಲಿ ಆಕೆ ಚುನಾವಣ ಪ್ರಚಾರ, ವಿವಿಧೆಡೆ ಭಾಷಣ-ಪ್ರವಚನ, ಕಾರ್ಯಕಾರಿಣಿ ಸಭೆ, ಪಕ್ಷದ ಮುಖಂಡರ ಭೇಟಿ ಇವುಗಳನ್ನು ನೆಪವಾಗಿರಿಸಿ ದಿನಗಳನ್ನು ಮುಂದೂಡುತ್ತಾ ಬರುತ್ತಿದ್ದು, ಇನ್ನಷ್ಟು ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

ಚೈತ್ರಾಳ ಬಗ್ಗೆ ಅನುಮಾನಗೊಂಡ ಸುದೀನ ಅವರು ಕೂಡಲೇ ಬಟ್ಟೆ ಅಂಗಡಿಯನ್ನು ಹಾಕಿ ಕೊಡುವಂತೆ ಅಥವಾ ನಾನು ನೀಡಿದ ಹಣವನ್ನು ಸಂಪೂರ್ಣವಾಗಿ ವಾಪಸು ನೀಡುವಂತೆ ಕೇಳಿಕೊಂಡರು. ಆಗ ಚೈತ್ರಾಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಳು ಹಾಗೂ ಬಾಡಿಗೆ ಗೂಂಡಾಗಳಿಂದ ಕೊಲೆ ಮಾಡಿಸುವುದಾಗಿ ಜೀವ ಬೆದರಿಕೆಯನ್ನೂ ಹಾಕಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Khalistani ಉಗ್ರನ ಹತ್ಯೆ ಆರೋಪ: ಭಾರತದ ವಿರುದ್ಧ ಸೇಡು ತೀರಿಸಲು ಮುಂದಾದ ಕೆನಡಾ

Advertisement

Udayavani is now on Telegram. Click here to join our channel and stay updated with the latest news.

Next