Advertisement

Chain theft: ಒಂಟಿ ಓಡಾಡುವ ಮಹಿಳೆಯರ ಬೆನ್ನಟ್ಟಿ ಸರ ಕದಿಯುತ್ತಿದ್ದವರ ಸೆರೆ

12:33 PM Dec 08, 2023 | Team Udayavani |

ಬೆಂಗಳೂರು: ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಹಿಂಬಾಲಿಸಿ ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿ ಸರ ಕಳವು ಮಾಡುತ್ತಿದ್ದ ರೌಡಿಶೀಟರ್‌ ಸೇರಿ ಮೂವರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ತಿಪಟೂರು ಮೂಲದ ಅಭಿಜಿತ್‌ ಅಲಿಯಾಸ್‌ ಜೀತು (32), ಸಲ್ಮಾನ್‌ ಅಲಿಯಾಸ್‌ ಹೆಬ್ಬೆಟ್ಟು(20), ರಾಕೇಶ್‌ ಅಲಿಯಾಸ್‌ ರವಿ(26) ಬಂಧಿತರು. ಆರೋಪಿಗಳಿಂದ 3.70 ಲಕ್ಷ ರೂ. ಮೌಲ್ಯದ 68 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯ ಕೆಂಪಾಪುರ ಪೈಪ್‌ಲೈನ್‌ ರಸ್ತೆಯಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರು ಕೆಲಸ ಮುಗಿಸಿಕೊಂಡು ನಡೆದು ಹೋಗುತ್ತಿದ್ದರು. ಆಗ ದ್ವಿಚಕ್ರ ವಾಹನದಲ್ಲಿ ಬಂದು ಇಬ್ಬರು ಬೈಕ್‌ ಸವಾರರು ವಿಳಾಸ ಕೇಳುವ ನೆಪದಲ್ಲಿ ಏಕಾಏಕಿ ಮಹಿಳೆಯ ಸರ ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಬಂಧಿತ ಮೂವರು ಅಪರಾಧ ಹಿನ್ನೆಲೆಯುಳ್ಳವ ರಾಗಿದ್ದು, ಈ ಪೈಕಿ ಅಭಿಜಿತ್‌ ತಿಪಟೂರು ಟೌನ್‌ ಠಾಣೆ ರೌಡಿಶೀಟರ್‌ ಆಗಿದ್ದಾನೆ. ಈ ಹಿಂದೆ ಹೊನ್ನವಳ್ಳಿ, ಗುಬ್ಬಿ, ಗಂಡಸಿ, ತಿಪಟೂರು ಟೌನ್‌ ಠಾಣೆ ವ್ಯಾಪ್ತಿಯಲ್ಲಿ ಕನ್ನ , ಪೋಕ್ಸೋ ಪ್ರಕರಣಗಳಲ್ಲಿ ಜೈಲು ಸೇರಿ, ಜಾಮೀನು ಪಡೆದು ಬಿಡುಗಡೆಯಾಗಿದ್ದಾನೆ. ಮತ್ತೂಬ್ಬ ಆರೋಪಿ ಸಲ್ಮಾನ್‌ ತಿಪಟೂರು ಟೌನ್‌ ಠಾಣೆ ವ್ಯಾಪ್ತಿಯಲ್ಲಿ ಕೊಲೆ, ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿರುವುದು ತನಿಖೆಯಿಂದ ತಿಳಿದು ಬಂದಿದೆ.

ಮತ್ತೂಬ್ಬ ಆರೋಪಿಯ ಹಿನ್ನೆಲೆ ಪರಿಶೀಲಿಸಲಾಗುತ್ತಿದೆ. ಆರೋಪಿಗಳ ಬಂಧನದಿಂದ ಸೋಲದೇವನಹಳ್ಳಿ, ನಂ ದಿನಿ ಲೇಔಟ್‌, ಸುಬ್ರಮಣ್ಯನಗರ, ರಾಜಾಜಿನಗರ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ಸರ ಕಳವು ಪ್ರಕರ ಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

Advertisement

ಕ್ರಿಕೆಟ್‌ ಬೆಟ್ಟಿಂಗ್‌ನಿಂದಾದ ಸಾಲ ತೀರಿಸಲು ಸರಗಳ್ಳತನ: ಆರೋಪಿ ಅಭಿಜಿತ್‌ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ಲಕ್ಷಾಂತರ ರೂ. ಹೂಡಿಕೆ ಮಾಡಿ, ಸಾಲ ತೀರಿಸಲು ಇತರೆ ಆರೋಪಿಗಳ ಜತೆ ಸೇರಿಕೊಂಡು ಸರ ಕಳವು ಮಾಡುತ್ತಿದ್ದಾನೆ. ಆರೋಪಿಗಳು ತಿಪಟೂರಿನಿಂದ ಬೆಂಗಳೂರಿಗೆ ಬಂದು ಸೋಲದೇವನಹಳ್ಳಿ ಮತ್ತು ಪೀಣ್ಯದಲ್ಲಿರುವ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ. ಈ ವೇಳೆ ಮನೆ ಹುಡುಕಬೇಕೆಂದು ಸಂಬಂಧಿಕರ ಬೈಕ್‌ ಪಡೆದು ಸ್ನೇಹಿತನ ಜತೆ ನಗರದ ವಿವಿಧೆಡೆ ಸುತ್ತಾಡಿ ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಹಿಂಬಾಲಿಸಿ ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿ ಚಿನ್ನದ ಸರ ಕಸಿದುಕೊಂಡು ಪರಾರಿಯಾಗುತ್ತಿದ್ದರು. ಸುಲಿಗೆ ಬಳಿಕ ಆರೋಪಿಗಳು ಸಂಬಂಧಿಕರ ಮನೆಗೆ ತೆರಳಿ ಬೈಕ್‌ ವಾಪಾಸ್‌ ಕೊಟ್ಟು ಮರು ದಿನ ತಿಪಟೂರಿಗೆ ಹೋಗಿ, ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿ, ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next