Advertisement

Chain Theft: ದೇವರಿಗೆ ಹರಕೆ ಹೊತ್ತು ಸರಕಳವು: ಬಂಧನ

04:15 PM Aug 21, 2023 | Team Udayavani |

ಬೆಂಗಳೂರು: ಮಲೆ ಮಹದೇಶ್ವರ ಬೆಟ್ಟಕ್ಕೆ ಹರಕೆ ಹೊತ್ತು ಮಹಿಳೆಯರ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಚಿಕ್ಕಮಗಳೂರು ಮೂಲದ ಮಂಜು ನಾಥ (26) ಮತ್ತು ಉತ್ತರಹಳ್ಳಿಯ ಯತೀಶ್‌ (28) ಬಂಧಿತರು. ಆರೋಪಿಗಳಿಂದ 3.4 ಲಕ್ಷ ರೂ. ಮೌಲ್ಯದ 25 ಗ್ರಾಂ ತೂಕದ ಚಿನ್ನದ ಸರ ಹಾಗೂ ಮೂರು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಆರೋಪಿಗಳು ಇತ್ತೀಚೆಗೆ ಆ.13 ರಂದು ಗಿರಿನಗರದ 11ನೇ ಕ್ರಾಸ್‌ನಲ್ಲಿ ಶಾಮಲಾ ಎಂಬವರು ವಾಕಿಂಗ್‌ ಮಾಡುವಾಗ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಶಾಮಲಾರ 25 ಗ್ರಾಂ

ತೂಕದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಇಬ್ಬರು ಆರೋಪಿಗಳು ಅಪರಾಧ ಹಿನ್ನೆಲೆವುಳ್ಳವರಾಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿರುವಾಗ ಮಂಜುನಾಥ ಮತ್ತು ಯತೀಶ್‌ ಪರಿಚಯವಾಗಿದೆ. ಎರಡು ತಿಂಗಳ ಹಿಂದೆ ಜಾಮೀನು ಪಡೆದು ಹೊರಬಂದ ಬಳಿಕ ಇಬ್ಬರು ಒಟ್ಟಿಗೆ ಸೇರಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು. ಅದರಂತೆ ಇತ್ತೀಚೆಗೆ ಚನ್ನಪಟ್ಟಣದಲ್ಲಿ ಪಲ್ಸರ್‌ ಬೈಕ್‌

ಕದ್ದಿದ್ದ ಆರೋಪಿಗಳು, ಅದೇ ದ್ವಿಚಕ್ರ ವಾಹನ ಬಳಸಿ ಆ.13 ರಂದು ಗಿರಿ ನಗರದಲ್ಲಿ ಮಹಿಳೆಯ ಸರ  ಕದ್ದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

Advertisement

ಮುಡಿ ಕೊಡುವ ಹರಕೆ: ಆರೋಪಿಗಳ ಪೈಕಿ ಮಂಜುನಾಥ್‌ ಪ್ರತಿ ಬಾರಿ ಸರ ಕಳವು ಮಾಡುವ ಮೊದಲು ಮಲೇ ಮಹದೇಶ್ವರ ಬೆಟ್ಟಕ್ಕೆ ಮುಡಿ ಕೊಡುವುದಾಗಿ ಹರಕೆ ಹೊರುತ್ತಾನೆ. ಅದರಂತೆ ಅಂದು ಸರಗಳ್ಳತನ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದರು. ಈ ವೇಳೆ ಆರೋಪಿ ಮಂಜುನಾಥ ತಲೆ ಕೂದಲು ಬೋಳಿಸಿಕೊಂಡು ಮಹದೇಶ್ವರನಿಗೆ ಹರಕೆ ತೀರಿಸಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಗಳ ಬಂಧನದಿಂದ ಗಿರಿನಗರ ಠಾಣೆಯಲ್ಲಿ ದಾಖಲಾಗಿದ್ದ ಒಂದು ಸರಗಳ್ಳತನ, ಎರಡು ದ್ವಿಚಕ್ರ ವಾಹನ ಕಳವು, ಚನ್ನಪಟ್ಟಣ ಠಾಣೆಯಲ್ಲಿ ದಾಖಲಾಗಿದ್ದ ದಿಚಕ್ರ ವಾಹನ

ಕಳವು ಸೇರಿ ಒಟ್ಟು ನಾಲ್ಕು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next