Advertisement

ಸರಗಳ್ಳತನ: ಮೂವರ ಬಂಧನ

12:44 PM Mar 21, 2022 | Team Udayavani |

ಬಳ್ಳಾರಿ: ಕುರುಗೋಡು ದೊಡ್ಡ ಬಸವೇಶ್ವರ ರಥೋತ್ಸವ ವೇಳೆ ಸರಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಕುರುಗೋಡು ಪೊಲೀಸರು, 80 ಸಾವಿರ ರೂ. ಮೌಲ್ಯದ 20 ಗ್ರಾಂ ಚಿನ್ನದ ಮಾಂಗಲ್ಯ ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸುಶೀಲಾ (55), ವಿಮಲ್‌ (55), ಉಷಾ (45) ಬಂಧಿತ ಆರೋಪಿಗಳು.

Advertisement

ಇದೇ ಮಾ.18 ರಂದು ನಡೆದ ಕುರುಗೋಡು ದೊಡ್ಡಬಸವೇಶ್ವರ ಜಾತ್ರೆಗೆ ಕುಟುಂಬ ಸಮೇತ ಬಂದಿದ್ದ ಶಿಲ್ಪಾ (34) ಎನ್ನುವವರು ಅಂದು ಸಂಜೆ 5:40ಕ್ಕೆ ದೇವಸ್ಥಾನದ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಯಾರೋ ತಳ್ಳಿದ್ದರಿಂದ ಕೆಳಗೆ ಬಿದ್ದಿದ್ದು, ಮೇಲಕ್ಕೆ ಏಳುತ್ತಿದ್ದಾಗ ಅಪರಿಚಿತ ಮಹಿಳೆಯೊಬ್ಬರು ಶಿಲ್ಪಾರ ಕೊರಳಲ್ಲಿದ್ದ 80 ಸಾವಿರ ರೂ. ಮೌಲ್ಯದ 20 ಗ್ರಾಂ ಚಿನ್ನದ ಮಾಂಗಲ್ಯ ಕಿತ್ತುಕೊಂಡು ತನ್ನ ಸಹಚರರೊಂದಿಗೆ ಪರಾರಿಯಾಗಿದ್ದು, ಈ ಕುರಿತು ಕುರುಗೋಡು ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಕುರುಗೋಡು ಪೊಲೀಸರು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್‌ಐ ಮೌನೇಶ್‌ ರಾಥೋಡ, ಸಿಬ್ಬಂದಿ, ಜಾತ್ರೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂರು ಜನರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಸರಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ವೇಳೆ 80 ಸಾವಿರ ರೂ. ಮೌಲ್ಯದ 20 ಗ್ರಾಂ ತೂಕದ ಮಾಂಗಲ್ಯವನ್ನು ಮತ್ತು ಕೃತ್ಯಕ್ಕೆ ಬಳಸಿದ್ದ 1 ಕಬ್ಬಿಣದ ಕಟರ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಸೈದುಲು ಅಡಾವತ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next