ಚಡಚಣ: ಪಟ್ಟಣವು ಗಡಿನಾಡಿಗೆ ಹೊಂದಿಕೊಂಡಿದ್ದು, ವ್ಯಾಪಾರ ವಹಿವಾಟಿಗೆ ಕೇಂದ್ರ ಸ್ಥಾನವಾಗಿ ಪ್ರಸಿದ್ಧವಾಗಿದೆ. ಪ್ರತಿಯೊಂದು ವಸ್ತು ಖರೀದಿಸಲು ಇಲ್ಲಿ ಬರಬೇಕಾಗುವುದು. ಈಗ ತಾಲೂಕಾಗಿ ಮಾರ್ಪಟ್ಟು ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಲಾಕ್ ಡೌನ್ ಸಡಿಲಿಕೆಯಿಂದ ಮಾರುಕಟ್ಟೆಯಲ್ಲಿ ಮತ್ತೆ ಮೊದಲಿನ ಕಳೆ ಬಂದಿದೆ.
ಈ ಸಲ ಬೇಸಿಗೆ ಕಾಲದಲ್ಲಿ ವ್ಯಾಪಾರ ಭರ್ಜರಿ ಯಾಗುವುದೆಂದು ಅಂಗಡಿಗಳ ಮಾಲೀಕರ ಕನಸಾಗಿತ್ತು. ಆದರೆ, ಅದಕ್ಕೆ ಕೋವಿಡ್ ಅಡ್ಡಿ ಬಂದು ಎರಡೂವರೆ ತಿಂಗಳು ದೇಶದಲ್ಲಿ ಲಾಕ್‌ಡೌನ್ ಹೇರಿದ್ದರಿಂದ ಎಲ್ಲ ಅಂಗಡಿಗಳು ಬಾಗಿಲು ಹಾಕಿ ಆರ್ಥಿಕ ನಷ್ಟ ಅನುಭವಿಸು ವಂತಾಯಿತು. ಬಸ್ ಸಂಚಾರ ಸ್ಥಗಿತಗೊಂಡು ಸುತ್ತಮುತ್ತಲಿನ ಗ್ರಾಮಗಳ ನಾಗರಿಕರು ಬಾರದೆ ಇರುವದರಿಂದ ಬಜಾರವು ಬಿಕೋ ಎನ್ನುತ್ತಿತ್ತು.
ಎಲ್ಲ ಶುಭ ಕಾರ್ಯಗಳು, ಜಾತ್ರೆ ಸಮಾರಂಭಗಳು ಸ್ಥಗಿತಗೊಂಡು ನಾಗರಿಕರನ್ನು ಮನೆಯಿಂದ ಹೊರಬರದಂತೆ ನೋಡಿಕೊಳ್ಳಲಾಗಿತ್ತು. ನಂತರ ಇಂದು ಜೂನ್ 8 ರಂದು ಮತ್ತಷ್ಟು ಸಡಿಲಿಕೆಯಾಗಿ ಬಜಾರದಲ್ಲಿ ಎಲ್ಲ ವ್ಯಾಪಾರ ಭರ್ಜರಿಯಾಗಿ ಜರುಗುತ್ತಿವೆ. ಗ್ರಾಹಕರು ಬಿಸಿಲಿನ ತಾಪವನ್ನು ಲೆಕ್ಕಿಸದೇ ವ್ಯಾಪಾರದಲ್ಲಿ ತೊಡಗಿರುವುದು ಕಂಡು ಬಂದಿತು.
ನಿತ್ಯ ವ್ಯಾಯಾಮ, ಯೋಗವನ್ನು ಮೈಗೂಡಿಸಿಕೊಂಡರೆ ನಮ್ಮ ಬಳಿ ಯಾವುದೇ ರೋಗ ಸುಳಿಯುವದಿಲ್ಲ. ಇದರ ಜತೆ ಸತ್ಸಂಗವು ಅವಶ್ಯವಾಗಿದೆ. ಕೋವಿಡ್ ರೋಗಕ್ಕೆ ಯೋಗವು ಮದ್ದಾಗಿದ್ದು, ಎಲ್ಲರೂ ನಿತ್ಯ ಯೋಗಾಭ್ಯಾಸ ಮಾಡಬೇಕು. ಇದರ ಜೊತೆಗೆ ದಿನಂಪ್ರತಿ ಮಾಸ್ಕ್, ಅಂತರ, ನಿಯಮಗಳೊಂದಿಗೆ ನಡೆಯಬೇಕು. ಇದು ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಒಬ್ಬರಿಗೆ ಹರಡುವ ಭಯಾನಕ ರೋಗವಾಗಿದೆ. ಯಾವುದೇ ವಿಚಾರ ಮಾಡದೇ ಸಂತೃಪ್ತಿಯಿಂದ ಸಾಗಿದರೆ ಯಾವುದೇ ರೋಗ ಬರಲಾರದು. ಎಲ್ಲರೂ ಅದನ್ನು ತೊಲಗಲು ಹೋರಾಟ ಮಾಡೋಣ ಎಂದು ನಿರಂತರ ಯೋಗ ಕೇಂದ್ರ ಸತ್ಸಂಗ ಸಮಿತಿ ಅಧ್ಯಕ್ಷ ಸಂಗಮೇಶ ಅವಜಿ ಹೇಳಿದರು.