Advertisement

ನಮ್ಮೂರ ಜಾತ್ರೆಗೆ 74ರ ಸಂಭ್ರಮ

12:01 PM Jan 24, 2020 | Naveen |

ಚಡಚಣ: ಪಟ್ಟಣದ ಆರಾಧ್ಯದೇವ ಸಂಗಮೇಶ್ವರ ಜಾನುವಾರುಗಳ ಜಾತ್ರೆಯು 74 ವರ್ಷಗಳ ಇತಿಹಾಸ ಹೊಂದಿದ್ದು, “ನಮ್ಮೂರ ಜಾತ್ರೆ’ ಎಂದೇ ಪ್ರಸಿದ್ಧಿ ಪಡೆದಿದೆ. ಪ್ರಸಕ್ತ ವರ್ಷ ಜ.24ರಿಂದ 31ರ ವರೆಗೆ ಜಾತ್ರಾ ಮಹೋತ್ಸವ ಜರುಗಲಿದೆ.

Advertisement

1946ರಲ್ಲಿ ವಿಜಯಪುರ ಹಾಗೂ ಸೊಲ್ಲಾಪುರ ಪಟ್ಟಣದಲ್ಲಿ ಜಾತ್ರೆ ನಡೆದಾಗ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಏಕಾಏಕಿ ಪ್ಲೇಗ್‌ ರೋಗ ಹರಡಿತ್ತು. ಜಾತ್ರೆಗೆ ಬಂದ ಜನರಲ್ಲಿ ಭಯವನ್ನುಂಟು ಮಾಡಿತ್ತು. ಸಾವಿರಾರು ಜಾತ್ರಾರ್ಥಿಗಳು ರೋಗದಿಂದ ನರಳಿ ತಮ್ಮ-ತಮ್ಮ ಗ್ರಾಮಗಳಿಗೆ ತೆರಳಿದರು. ಅದರಲ್ಲಿ ಕೆಲ ಜನರು ಚಡಚಣ ಬಜಾರದಲ್ಲಿ ದನಕರುಗಳೊಂದಿಗೆ ಬೀಡು ಬಿಟ್ಟರು. ಇದನ್ನರಿತ ಗ್ರಾಮದ ಗಣ್ಯರಾದ ದಿ| ಜೀವರಾಜ ರಾವಜಿ ದೋಶಿ, ಗುರುಬಾಳಪ್ಪ ಅವಜಿ, ರಾಮಚಂದ್ರ ಯಂಕಂಚಿ, ಗುರುಬಾಳಪ್ಪ ಜೀರಂಕಲಗಿ ಅವರು ಬೀಡು ಬಿಟ್ಟ ಜನರ ರಕ್ಷಣೆಗೆ ಮುಂದಾದರು.

ಅಂದಿನಿಂದ ಸಂಗಮೇಶ್ವರ ಜಾತ್ರೆಯು ಅವರಾತ್ರಿ ಅಮಾವಾಸ್ಯೆಯಿಂದ ಆರಂಭಗೊಂಡಿತು ಎಂದು ಹೇಳಲಾಗಿದೆ. ಜಾತ್ರೆಯ ರೂವಾರಿ ಜಿವರಾಜ ರಾವಜೀ ದೋಶಿ ಹಾಗೂ ಸಂಗಡಿಗರು 60 ವರ್ಷದವರೆಗೆ ಜಾತ್ರೆಯನ್ನು ವಿಜೃಂಭಣೆಯಿಂದ ನೆರವೇರಿಸುತ್ತಾ ಬಂದಿದ್ದಾರೆ. ಈ ಜಾತ್ರೆಗೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳ ಜಾನುವಾರು ಖರೀದಿದಾರರು ಆಗಮಿಸುತ್ತಾರೆ. ಇಂದಿನಿಂದ ಜಾತ್ರೆ: ಪ್ರಸಕ್ತ ವರ್ಷ ಸಂಗಮೇಶ್ವರ ಜಾನುವಾರು ಜಾತ್ರೆಯು ಜ.24ರಿಂದ 30ರ ವರೆಗೆ ಜರುಗಲಿದೆ. ಜ.24ರಂದು ಬೆಳಗ್ಗೆ 7ಗಂಟೆಗೆ ವೀರಭದ್ರೇಶ್ವರ ದೇವರ ಗುಡಿಯಿಂದ ಪಲ್ಲಕ್ಕಿ, ನಂದಿ ಧ್ವಜ ವಿವಿಧ ವಾದ್ಯವೈಭವಗಳೊಂದಿಗೆ ಸಂಗಮೇಶ್ವರ ದೇವಸ್ಥಾನಕ್ಕೆ ಆಗಮಿಸಲಿದೆ. ಬೆಳಗ್ಗೆ 9ಗಂಟೆಗೆ ರುದ್ರಕಟ್ಟೆಯ ಮೇಲೆ ದೇವರ ನುಡಿಮುತ್ತುಗಳ
ನಂತರ ಗಂಗಾಧರ ಪಾವಲೆಯರಿಂದ ಮಹಾಪ್ರಸಾದ ಜರುಗಲಿದೆ.

ಜ.25ರಂದು ಮಧ್ಯಾಹ್ನ 3ಗಂಟೆಗೆ ವೀರಭದ್ರೇಶ್ವರ ದೇವರ ಗುಡಿಯಿಂದ ಪಲ್ಲಕ್ಕಿ, ನಂದಿ ಧ್ವಜವು ನಾಗಠಾಣ ಕ್ಷೇತ್ರದ ಶಾಸಕ ಡಾ| ದೇವಾನಂದ ಚವ್ಹಾಣರ ಸಹಕಾರದೊಂದಿಗೆ ವಿವಿಧ ವಾದ್ಯವೈಭವಗಳೊಂದಿಗೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ನವಿಲುಕುಣಿತ, ಗೊಂಬೆ ಕುಣಿತ, ಮಹಿಳೆಯರಿಂದ ಡೊಳ್ಳು ಕುಣಿತ ಕಲಾವಿದರ ಕಲೆಯೊಂದಿಗೆ ಸಂಗಮೇಶ್ವರ ದೇವಸ್ಥಾನಕ್ಕೆ ಬರುವುದು. ರಾತ್ರಿ 9ಗಂಟೆಗೆ ದೇವಸ್ಥಾನದ ಹತ್ತಿರವಿರುವ ಎತ್ತರದ ಸ್ಥಳದಲ್ಲಿ ಮದ್ದು ಸುಡಲಾಗುವುದು.

ಜ.26ರಂದು ಮಧ್ಯಾಹ್ನ 2:30ಗಂಟೆಗೆ ಚಡಚಣ ಪಟ್ಟಣ ಪಂಚಾಯತ ವತಿಯಿಂದ ಪ್ರಸಿದ್ಧ ಜಂಗೀ ನಿಕಾಲಿ ಕುಸ್ತಿಗಳು, ಜ.30ರಂದು ಸಂಜೆ 7ಗಂಟೆಗೆ ಸಂಗಮೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ,ನಂದಿ ಧ್ವಜ, ವಾದ್ಯಗಳೊಂದಿಗೆ ವೀರಭದ್ರೇಶ್ವರ ಗುಡಿಗೆ ತಲುಪುವುದು. ಚಡಚಣ ಸುತ್ತಮುತ್ತಲಿನ ಗ್ರಾಮಸ್ಥರು ಜಾತ್ರೆಗೆ ಆಗಮಿಸಿ ಸಂಗಮೇಶ್ವರ ದರ್ಶನ ಪಡೆದು ಪುನೀತರಾಗಬೇಕೆಂದು ಜಾತ್ರಾ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಈ ಸಲವೂ ಸಂಗಮೇಶ್ವರನ ಜಾತ್ರೆ ವೈಭವದಿಂದ ಜರುಗಲಿದೆ. ನುಡಿಮುತ್ತುಗಳನ್ನು ಕೇಳಲು ಬರುವ ಭಕ್ತಾದಿಗಳಿಗೆ ಕೂಡ್ರುವ ವ್ಯವಸ್ಥೆ ಮಾಡಲಾಗಿದೆ. ಪ್ರಸಾದ ವ್ಯವಸ್ಥೆಯೂ ಇದೆ. ಜಾನುವಾರು ವ್ಯಾಪಾರಿಗಳು ಜಾತ್ರೆಗೆ ಆಗಮಿಸಿ ಲಾಭ ಪಡೆದುಕೊಳ್ಳಬೇಕು. ದಿನಂಪ್ರತಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗುತ್ತವೆ.
ಗಂಗಾಧರ ಪಾವಲೆ,
ಸಂಗಮೇಶ್ವರ ಸಂಸ್ಥೆ ಅಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next