Advertisement

ಗ್ರಾಮಕ್ಕೊಂದು ಗ್ರಂಥಾಲಯ ಇಂದಿನ ತುರ್ತು ಅಗತ್ಯ

04:29 PM Feb 17, 2020 | Naveen |

ಚಡಚಣ: ಮನೆಗೊಂದು ಶೌಚಾಲಯ ಎಷ್ಟು ಮುಖ್ಯವೋ ಅಷ್ಟೇ ಗ್ರಾಮಕ್ಕೊಂದು ಗ್ರಂಥಾಲಯ ಮುಖ್ಯ. ಗ್ರಾಮದಲ್ಲಿ ಗ್ರಂಥಾಲಯವಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವುದರ ಜತೆಗೆ ಜ್ಞಾನದ ಕೊರತೆ ನೀಗುತ್ತದೆ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಗ್ರಂಥಾಲಯ ಹಾಗೂ ಮಾಹಿತಿ ವಿಭಾಗದ ಮುಖ್ಯಸ್ಥ ಡಿ.ಬಿ. ಕುಂಬಾರ ಹೇಳಿದರು.

Advertisement

ಸಾರ್ವಜನಿಕ ಗ್ರಂಥಾಲಯಗಳ ಮಾಹಿತಿ ಕೌಶಲ್ಯ ವಿಷಯದ ಮೇಲೆ ಪಟ್ಟಣದ ಸಂಗಮೇಶ್ವರ ಮಹಾವಿದ್ಯಾಲಯದಲ್ಲಿ ನಡೆದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ತಂತ್ರಜ್ಞಾನ ಯುಗದಲ್ಲಿ ಕೂಡಾ ಸಾರ್ವಜನಿಕ ಗ್ರಂಥಾಲಯ ಪಾತ್ರ ಹಿರಿದಾದುದು.

ಗ್ರಂಥಾಲಯದಿಂದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ನಿಖರ ಮಾಹಿತಿ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಾಜ್ಯದಲ್ಲಿ ಸುಮಾರು 8,000 ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿವೆ ಎಂದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತಿ ಗ್ರಾಮಕ್ಕೊಂದು ಗ್ರಂಥಾಲಯಗಳು ನಿರ್ಮಾಣ ಮಾಡಿದರೆ ಗ್ರಾಮಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ತುಮಕೂರು ವಿಶ್ವವಿದ್ಯಾಲಯದ ಸಂಪತ್‌ಕುಮಾರ ಬಿ.ಟಿ. ಮಾತನಾಡಿ, ಗ್ರಂಥಾಲಯಗಳ ಸಮಗ್ರ ಆಳ, ಅಗಲ, ಉಪಯೋಗ ಹಾಗೂ ಜ್ಞಾನಾರ್ಜನೆಯ
ವಿವಿಧ ಹಂತಗಳ ಮಾಹಿತಿ ನೀಡಿದರು. ಮಹಾರಾಷ್ಟ್ರದ ಮುಂಬೈ ಕೇಂದ್ರೀಯ ವಿಶ್ವ ವಿದ್ಯಾಲಯದ ಪ್ರಮುಖ ಗ್ರಂಥಪಾಲಕ ಆನಂದ ದೊಡ್ಡಮನಿ ಮಾತನಾಡಿ, ಗ್ರಂಥಾಲಯದಲ್ಲಿ ಪಡೆಯುವ ಶೈಕ್ಷಣಿಕ ಮೌಲ್ಯಗಳು ಹಾಗೂ ಸಂಶೋಧನೆಯಲ್ಲಿನ ತೊಡಗುವ ಪ್ರತಿಯೊಬ್ಬರು ಕೃತಿ ಚಾರ್ಯ ಎಚ್ಚರಿಕೆ ವಹಿಸುವ ಕುರಿತು ಸಮಗ್ರ ಮಾಹಿತಿ ನೀಡಿದರು.

ಕಾರ್ಯಕ್ರಮದ ಎಂ.ಕೆ. ಬಿರಾದಾರ ಪ್ರಾಸ್ತಾವಿಕ ಮತನಾಡಿ, ಸಾರ್ವಜನಿಕ ಗ್ರಂಥಾಲಯದಿಂದ ಪ್ರತಿಯೊಬ್ಬರು ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಡಾ| ಎಸ್‌.ಎಸ್‌. ದೇಸಾಯಿ ವಿಚಾರ ಸಂಕಿರಣಕ್ಕೆ ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ವಿಚಾರ ಸಂಕಿರಣದಲ್ಲಿ ಸಂಗಮೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಿ.ಜಿ. ಮುತ್ತಿನ, ನಾಯಕ ಬಂಕಾಪುರ, ಡಾ| ಮಹೇಶ ಹೊರಕೇರಿ,
ಡಾ| ಜೆ.ಶಿವರಾಮ, ಡಾ| ವಿಜಯಕುಮಾರ ಮೂಲಿಮನಿ, ವೈ.ಬಿ. ಕೊರಡೂರ, ನಿರ್ದೇಶಕರಾದ ಬಿ.ಆರ್‌. ಯಂಕಂಚಿ, ಅಫಿಯಾ ಶಾಜಾದ, ಪ್ರಾಚಾರ್ಯ ಡಾ| ಎಸ್‌. ಎಸ್‌. ಚೋರಗಿ, ಎಂ.ಎಸ್‌. ಮಾಗಣಗೇರಿ ಸೇರಿದಂತೆ ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗದ ಪ್ರಾಧ್ಯಾಪಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧ ಮಹಾವಿದ್ಯಾಲಯಗಳಿಂದ ಸುಮಾರು 200ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ತಮ್ಮ ವಿಚಾರಗಳು ಮಂಡಿಸಿ ಪ್ರಮಾಣ ಪತ್ರ ಪಡೆದುಕೊಂಡರು. ಡಾ| ಎಸ್‌.ಬಿ. ರಾಠೊಡ ಸ್ವಾಗತಿಸಿದರು. ಬಸವರಾಜ ಎಳ್ಳೂರ ಹಾಗೂ ದರೇಶ ಕುಮಟಗಿ ನಿರೂಪಿಸಿದರು. ಮಹಾಂತೇಶ ಜನವಾಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next